ವಾಟರ್ ಆಕ್ಟಿವಿಟೀಸ್ ನಂತರ ಉಸಿರಾಟದ ತೊಂದರೆ : ರಕ್ಷಣಾ ಇಲಾಖೆಯ ನೌಕರ ಸಾವು

ಕಾರವಾರ: ಹಾರ್ನಬಿಲ್ ರೆಸಾರ್ಟ ನಿಂದ ವಿಜಿಲಿಂಗವುಡ್ ತನಕ ವಾಟರ್ ಆಕ್ಟಿವಿಟೀಸ್ ಮಾಡಿ,‌ನಂತರ ಈಜಲು ಕಾಳಿ ನದಿಗೆ ಇಳಿದ ರಕ್ಷಣಾ ಇಲಾಖೆಯ ಉದ್ಯೋಗಿ ಕೃಷ್ಣಮೂರ್ತಿ ಎಂ.ಜಿ. (59 ) ಎಂಬುವವರು ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡಯ್ಯುವಾಗ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ.
ಇವರು ಬೆಂಗಳೂರು ಜಿಲ್ಲೆ ಮುಕ್ಕೋಡ್ಲು ಸನಿಹ ತಟ್ಟೆಗುಪ್ಪೆ ಗ್ರಾಮದ ನಿವಾಸಿ. ಅಳಿಯ ಗಂಗರಾಜು ಸಿ.ಸಿ. ಹಾಗೂ 22 ಜನರೊಂದಿಗೆ ಇವರು ದಾಂಡೇಲಿ ರಿವರ್ ರಾಫ್ಟಿಂಗ್ ಪ್ರವಾಸಕ್ಕೆ ಬಂದಿದ್ದರು‌ . ಮಾವ ಕೃಷ್ಣಮೂರ್ತಿ ಅವರಿಗೆ ಅಸ್ತಮಾ ಕಾಯಿಲೆ ಇದ್ದು, ನದಿಯಲ್ಲಿ ಲೈಫ್ ಜಾಕೆಟ್ ಹಾಕಿ ಈಜುವಾಗ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ತಕ್ಷಣ ಅವರನ್ನು ರೆಸಾರ್ಟ ನವರ ಸಹಾಯದಿಂದ ಕೆಪಿಸಿ‌ ಗಣೇಶ ಗುಡಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸಗೆ ದಾಂಡೇಲಿಗೆ ಒಯ್ಯುವಾಗ ಅವರು ಶಾಂತಸ್ಥಿತಿ ತಲುಪಿದರು. ದಾಂಡೇಲಿ ಆಸ್ಪತ್ರೆ ವೈದ್ಯರು ಕೃಷ್ಣಮೂರ್ತಿ ಮೃತಪಟ್ಟಿರುವುದಾಗಿ ಧೃಡಪಡಿಸಿದರು. ಮಾವನ ಸಾವಿನ ಕುರಿತು ಸಂಶಯವಿಲ್ಲ ಎಂದು ಅಳಿಯ ಗಂಗರಾಜ್, ಜೊಯಿಡಾ ರಾಮನಗರ ಪೊಲೀಸ್ ಠಾಣೆಗೆ ಕೊಟ್ಟ ದೂರಿನಲ್ಲಿ ವಿವರಿಸಿದ್ದಾರೆ. ಗಂಗರಾಜು ವೃತ್ತಿಯಿಂದ ಪಿಡಿಒ ಆಗಿ ಕೆಲಸ ಮಾಡುತ್ತಿದ್ದು ಕುಟುಂಬ , ಸ್ನೇಹಿತರ ಜೊತೆ ಸೇರಿ 23 ಜನ ಪ್ರವಾಸಕ್ಕೆ ಬಂದಿದ್ದರು.
…..

Latest Indian news

Popular Stories