ಕಾರ್ ಓವರ್ ಟೇಕ್ ಮಾಡಿದ್ದಕ್ಕೆ ಸಿದ್ದಿ ಯುವಕನ ಮೇಲೆ ಹಲ್ಲೆ ಆರೋಪ : ಮೃತಪಟ್ಟ ಯುವಕ ಪ್ರಜ್ವಲ್ ಕಕ್ಕೇರಿಕರ್

ಕಾರವಾರ: ಕಾರ್ ನ್ನು ಓವರ್ ಟೇಕ್ ಮಾಡಿ ಮುಂದೆ ಹೋದ ಎಂಬ ನೆಪದ ಕಾರಣಕ್ಕೆ ಯುವಕರ ಗುಂಪು ಬೈಕ್ ಸವಾರ , ಸಿದ್ದಿ ಸಮುದಾಯದ ಯುವಕ ಪ್ರಜ್ವಲ್ ಪ್ರಕಾಶ್ ಕಕ್ಕೇರಿಕರ್ (24) ಮೇಲೆ ದಾಳಿ ಮಾಡಿದ ಘಟನೆ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ನಡೆದಿದೆ.

ಹುಣಶೆಟ್ಟಿ ಕೊಪ್ಪದಲ್ಲಿ ಜಾತ್ರೆ ಮುಗಿಸಿ ಬೈಕ್ ಮೇಲೆ ಮನೆಗೆ ಮರಳುವಾಗ ದಾರಿ ಮಧ್ಯೆ
ಕಾರ್ ವೊಂದನ್ನು ಓವರ್ ಟೇಕ್ ಮಾಡಿದ ಪ್ರಜ್ವಲ್ . ಇದರಿಂದ ಕುಪಿತರಾದ ಕಾರ್ ನಲ್ಲಿದ್ದ ಯುವಕರು ಸಿದ್ದಿ ಯುವಕನ ಮೇಲೆ ಹಲ್ಲೆ ಮಾಡಿದ ಕಾರಣ ಯುವಕ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಯುವಕ ಹಳಿಯಾಳ ಮೂಲದವನು .ಪ್ರಜ್ವಲ್ ಸಾವಿಗೆ ಯುವಕರ ಗುಂಪಿನ ದಾಳಿ ಕಾರಣ ಎಂದು ಪ್ರಜ್ವಲ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ‌ .

ಪೊಲೀಸರು ಘಟನೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಜ್ವಲ್ ಮೇಲೆ ಸಾಣಾ ಮರಾಠಿ, ನಿತೇಶ್ ಪಾಟೀಲ್, ಪಾಂಡುರಂಗ , ಅನಿಕೇತ್ ವಿ.ಮಿರಾಶಿ ಹಾಗೂ ಸಂಗಡಿಗರು ನಡೆಸಿದ ಹಲ್ಲೆ ಮಾಡಿದ್ದಾರೆಂದು ಮೃತಪಟ್ಟ ಯುವಕನ ಸಂಬಂಧಿಕರು ಆರೋಪಿಸಿದ್ದಾರೆ. ಪೊಲೀಸರು ಈಗಾಗಲೇ ಪಾಂಡು ಎಂಬಾತನನ್ನು ಬಂಧಿಸಿ‌, ತನಿಖೆ ಮಾಡುತ್ತಿದ್ದಾರೆ.

….

Latest Indian news

Popular Stories