ಕಾರವಾರ:ಕಾರವಾರದ ಕಾಳಿ ನದಿ ಸೇತುವೆ ಸಮೀಪದ ಕೋಡಿಬಾಗದಲ್ಲಿರುವ ಕಾಫ್ರಿ ದೇವಸ್ಥಾನದ ಹುಂಡಿ ಕಳ್ಳತನ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಬೆಳಗಿನ ಜಾವ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ದೇವಸ್ಥಾನ ಹಾಲ್ ಹಾಗೂ ಗರ್ಭಗುಡಿ ಹತ್ತಿರ ಇರುವ ಎರಡು ಹುಂಡಿ ಒಡೆದು ನಾಣ್ಯ ಹಾಗೂ ಹಣ ಕಳ್ಳತನ ಮಾಡಲಾಗಿದೆ. ವಿಶೇಷ ಅಂದರೆ ದೇವರ ಬಂಗಾರದ ಆಭರಣಗಳನ್ನು ಕಳ್ಳರು ದೋಚಿಲ್ಲ. ಆಫ್ರಿಕಾ ಪ್ರಸಿದ್ದ ಸಂತನ ನೆನಪಿಗಾಗಿ ಕಟ್ಟಿದ ದೇವಸ್ಥಾನ ಇದಾಗಿದೆ. ಪೊಲೀಸರು ಶ್ವಾನ ದಳ ಬಳಸಿ ಕಳ್ಳರ ಜಾಡು ಹಿಡಿಯಲು ತನಿಖೆ ಆರಂಭಿಸಿದ್ದಾರೆ. ದೇವಸ್ಥಾನ ಸಮೀಪದ ಲಾಡ್ಜ ಹಾಗೂ ಹೋಟೆಲ್ ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ದೇವಸ್ಥಾನದ ಮೊಕ್ತೆಸರ ಬಳಿ ಮಾಹಿತಿ ಸಂಗ್ರಹ ನಡೆದಿದೆ