ಉ.ಕ | ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸಂದೇಶ ಹರಡಿದರೆ ಕಠಿಣ ಕ್ರಮ ; ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ : ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿ ಹಾಗೂ ಜನ ಜೀವನ ಸುಸ್ಥಿಗೆ ತರುವ ಬಗ್ಗೆ ಜಿಲ್ಲಾಡಳಿತವು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಕೆಲವು ಸಾರ್ವಜನಿಕರು ತಮ್ಮ ವಾಟ್ಸಾಪ್ ಗುಂಪುಗಳಲ್ಲಿ ಹಾನಿಯ ವಿವರವನ್ನು ತೋರಿಸುವಂತಹ ಸುಳ್ಳು ಸಂದೇಶ, ವೀಡಿಯೊಗಳು ಹರಿಬಿಡುತ್ತಿದ್ದಾರೆ. ಇಂತಹ ಕೃತ್ಯ ದಿಂದ ಸಂತ್ರಸ್ತರ ಅಘಾತಕ್ಕೊಳಗಾಗುವ ಸಂಭವವಿರುವುದರಿಂದ ಇಂತಹ ಸಂದೇಶ, ವೀಡಿಯೊಗಳನ್ನು ಹರಿಬಿಡುತ್ತಿರುವುದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ.
ಸುಳ್ಳು ಸಂದೇಶ, ವೀಡಿಯೊಗಳನ್ನು ಹರಿಬಿಟ್ಟು ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುವಂತೆ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾರ್ವಜನಿಕರು ಸುಳ್ಳು ಸಂದೇಶಗಳನ್ನು ಖಚಿತ ಪಡಿಸಿಕೊಳ್ಳದೇ ಹಂಚಿಕೆ ಮಾಡಬಾರದೆಂದು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

Latest Indian news

Popular Stories