ಕಾರವಾರ : ನಿಜವಾದ ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲೆಗಳನ್ನು ಸಲ್ಲಿಸಿ ಮಂಡಳಿಯಲ್ಲಿ ನೊಂದಾಯಿಸುವುದು ಮತ್ತು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಹೇಳಿದರು.
ಬುಧುವಾರ ಕಾರ್ಮಿಕರಿಗೆ ಆಟೋ ಮೂಲಕ ಅರಿವು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಹಸಿರು ನಿಶಾನೆ ತೋರಿ ಮಾತನಾಡಿದರು.
ಅನಧಿಕೃತವಾಗಿ ಕಾರ್ಡ ಪಡೆದ ಕಾರ್ಮಿಕರು ತಾವೆ ಖುದ್ದಾಗಿ ಕಾರ್ಮಿಕ ನಿರೀಕ್ಷಕರ ಕಛೇರಿಗೆ ತೆರಳಿ
ಹಿರಿಯ ಕಾರ್ಮಿಕ ನಿರೀಕ್ಷಕರ ಬಳಿ ಗುರುತಿನ ಚೀಟಿಯನ್ನು ಹಿಂದಿರಿಗಿಸುವ ಮೂಲಕ ತಮ್ಮ ನೊಂದಣಿಯನ್ನು ರದ್ದು ಪಡೆಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ನಕಲಿ ಕಾರ್ಮಿಕರು ಈಗಾಗಲೇ ನೊಂದಣಿ ಪತ್ರ ಪಡೆದಲ್ಲಿ ತಕ್ಷಣವೇ ಕಾರ್ಮಿಕ ಇಲಾಖೆ ಕಛೇರಿಗೆ ಹಿಂದಿರುಗಿಸಿ ಸಜ್ಜನರಾಗಬೇಕು. ನಂತರ ದಿನಗಳಲ್ಲಿ ಒಂದು ವೇಳೆ ನಕಲಿ ಕಾರ್ಮಿಕರೆಂದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.