ಉತ್ತರ ಕನ್ನಡದ ಸೂರ್ಯನ ದರ್ಶ‌ನ: ಮಳೆಗೆ ವಿರಾಮ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಸೂರ್ಯನ ದರ್ಶನವಾಗಿದೆ. ಇದು ಕೃಷಿ ಚಟುವಟಿಕೆ ಪೂರಕ ವಾತಾವರಣ ಸೃಷ್ಟಿಸಿದೆ. ಆದರೆ ಕಾರವಾರ ಸಮೀಪ ದೇವಭಾಗ ಕಡಲತೀರದಲ್ಲಿ ಕಡಲ್ಕೊರೆತ ಮುಂದುವರಿದಿದೆ.

ಶುಕ್ರವಾರ ಹಗಲು ಮಳೆಗೆ ವಿರಾಮ ಬಿದ್ದಿತ್ತು.
ಉತ್ತರ ಕನ್ನಡದ ಕರಾವಳಿ ತಾಲೂಕುಗಳಲ್ಲಿ ಬೆಳಿಗ್ಗೆ ಹೊತ್ತು ಮಳೆ ಕೊಂಚ ಬಿಡುವು ನೀಡಿದ್ದು, ಬೆಳಿಗ್ಗೆ ಮೋಡ‌ ಕವಿದ ವಾತಾವರಣ ಇತ್ತು. ಶಿರಸಿಯಲ್ಲಿ ಬೆಳಿಗ್ಗೆ ರಭಸದ ಮಳೆ ಬಂತು.

ನಂತರ ಮಧ್ಯಾಹ್ನ ದಿಂದ ಸಂಜೆತನಕ ಕಾರವಾರ ಹಾಗೂ ಕುಮಟಾದಲ್ಲಿ ಬಿಸಿಲು ಆವರಿಸಿತ್ತು. ಸಂಜೆ ಮತ್ತೆ ಮಳೆ ಬೀಳಲು ಆರಂಭಿಸಿತು.ಶನಿವಾರ
ಸಾಧರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು,ಮಳೆ ಮುಂದುವರಿಯಲಿದೆ ಎಂದು ಹೇಳಿದೆ.

ಶುಕ್ರವಾರ ಬೆಳಗಿನ ಜಾವ ಹೊನ್ನಾವರ, ಭಟ್ಕಳ, ಕಾರವಾರ ತಾಲೂಕಿನಾದ್ಯಂತ ಅತ್ಯಧಿಕ ಪ್ರಮಾಣದ ಮಳೆ ಸುರಿದಿದೆ. ಕಳೆದ 24 ತಾಸುಗಳಲ್ಲಿ
ಹೊನ್ನಾವರ 30.1 ಮಿಲಿ ಮೀಟರ್ ಮಳೆ ಆಗಿದೆ. ಭಟ್ಕಳ 23 , ಕುಮಟಾ 30.3 , ಕಾರವಾರ 73.1, ಅಂಕೋಲಾ 30 , ಸಿದ್ದಾಪುರ 19 ,ಶಿರಸಿ 25, ಯಲ್ಲಾಪುರ 19 ,ದಾಂಡೇಲಿ 23.9, ಸುಫಾ 23.7 , ಮುಂಡಗೋಡ 12 , ಹಳಿಯಾಳ 6.6 ಎಂ.ಎಂ. ಮಳೆಯಾಗಿದೆ.

ಜಿಲ್ಲೆಯ ಸರಾಸರಿ 24 .8 ಮಿಲಿ ಮೀಟರ್ ಮಳೆ ಸುರಿದಿದೆ‌. ಹಳಿಯಾಳದಲ್ಲಿ ಕಡಿಮೆ ಮಳೆ ದಾಖಲಾಗಿದೆ. ಕಾರವಾರದಲ್ಲಿ ಅತೀ ಹೆಚ್ಚು ಮಳೆ ಬಿದ್ದಿದೆ. ಈ ವರ್ಷದಲ್ಲಿ ಭಟ್ಕಳ ಅತೀ ಹೆಚ್ಚು ಮಳೆ ಬಿದ್ದ ನಗರ ಎಂದು ದಾಖಲಾಗಿದೆ.
….

Latest Indian news

Popular Stories