ತಾಂತ್ರಿಕ ದೋಷ ಹಾಗೂ ಗಾಳಿ ಹೊಡೆತಕ್ಕೆ ಮುಳಗಲಿದ್ದ ಬೋಟ್ :17 ಮೀನುಗಾರರ ರಕ್ಷಣೆ

ಕಾರವಾರ : ಅರಬ್ಬೀ ಸಮುದ್ರದಲ್ಲಿ ಭಾರೀ‌ ಗಾಳಿ ಹಾಗೂ ತಾಂತ್ರಿಕ ದೋಷದಿಂದ ಮುಳುಗಡೆಯಾಗಲಿದ್ದ ಮೀನುಗಾರಿಕಾ ಬೋಟನ್ನು ಮತ್ತೊಂದು ಮೀನುಗಾರಿಕಾ ಬೋಟ್ ರಕ್ಷಿಸಿದ ಘಟನೆ ಸೋಮವಾರ ಸಂಜೆ ಕಾರವಾರ ಸಮೀಪ ಮುದಗಾ ಬಂದರಿನಲ್ಲಿ ನಡೆದಿದೆ.

IMG 20240304 WA0061 Uttara Kannada, Featured Story
ಮುದಗಾ ಬಂದರಿನಿಂದ ಹೊರಟಿದ್ದ ಬೋಟ್ ತಾಂತ್ರಿಕದೋಷಕ್ಕೆ ಸಿಲುಕಿತು‌ .ಹಾಗೂ ಭಾರೀ ಗಾಳಿ ಕಾರಣ ಬೋಟ್ ದಿಕ್ಕು ಬದಲಿಸುವಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಬೋಟ್ ಮುಳುಗ ಹತ್ತಿತು. ಇದನ್ನು ಕಂಡ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗುತ್ತಿದ್ದ ಬೋಟನ್ನು ರಕ್ಷಿಸಿದೆ.
ಚಂದ್ರ ತಾಂಡೇಲ್ ಮಾಲಿಕತ್ವದ ಓಂ ನಮಃ ಶಿವಾಯ ಹೆಸರಿನ ಮೀನುಗಾರಿಕಾ ಬೋಟ್ ನ್ನು ಸುರಕ್ಷಿತವಾಗಿ ದಡಕ್ಕೆ ಎಳೆದು ತರಲಾಗಿದೆ. ಹಾಗೂ
17 ಜನ ಮೀನುಗಾರರ ರಕ್ಷಣೆ ಸಹ ಮಾಡಲಾಗಿದೆ.
ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಪಾಯದಿಂದ ಪಾರಾಗಿದೆ. ಸುರಕ್ಷಿತವಾಗಿ ದಡ ಸೇರಿದೆ.
….

Latest Indian news

Popular Stories