ಅಂಜಲಿ ನಿಂಬಾಳ್ಕರ್ ಹೆಸರಿಗೆ ತೇಜೋವಧೆ ಮಾಡುವುದು ಖಂಡನೀಯ: ಶಂಭು ಶೆಟ್ಟಿ

ಕಾರವಾರ: ಕೆಲವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರ ಹೆಸರನ್ನ ತೇಜೋವದೆ ಮಾಡುತ್ತಿದ್ದು ಇದನ್ನ ಜಿಲ್ಲಾ ಕಾಂಗ್ರೆಸ್ ಖಂಡಿಸಲಿದೆ ಎಂದು ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಹೇಳಿದರು.

ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಅಂಜಲಿ ನಿಂಬಾಳ್ಕರ್ ನಟಿ ರಶ್ಮಿಕಾ ಮಂದಣ್ಣ ಮುಂಬೈ ಚುನಾವಣೆ ಹಿನ್ನಲೆಯಲ್ಲಿ ವಿಡಿಯೋ ಮಾಡಿ ಅಟಲ್ ಸೇತುವೆ ತೋರಿಸಿ ಅಭಿವೃದ್ಧಿಗಾಗಿ ಮತ ನೀಡಿ ಎಂದು ಪರೋಕ್ಷವಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದರು.

ಇದಕ್ಕೆ ಡಾ. ಅಂಜಲಿ ನಿಂಬಾಳ್ಕರ್ ಅಟಲ್ ಸೇತುವೆ ತೋರಿಸುವ ಬದಲು ಬುಲೆಟ್ ಟ್ರೈನ್ ಬಗ್ಗೆ ಮಾತನಾಡುವಂತೆ ಹೇಳಿದ್ದರು. ಆದರೆ ಇದೇ ವಿಚಾರವನ್ನ ಬದಲಿಸಿ‌ ಅಂಜಲಿ ನಿಂಬಾಳ್ಕರ್ ವಿರುದ್ದ ಅಪಪ್ರಚಾರ ಮಾಡುವ ಕೆಲಸಕ್ಕೆ ಕೆಲವರು ಹೊರಟಿದ್ದಾರೆ ಎಂದರು.

ಅಂಜಲಿ ಅವರು ತಮ್ಮ ಟ್ವಿಟ್ ನಲ್ಲಿ ನಟಿ ರಶ್ಮಿಕಾ ಬಗ್ಗೆ ನೀನು ಹೊಗಲಿದರೆ ದೇಶದಲ್ಲಿ ಅಭಿನಯೇತ್ರಿ ಆಗುವುದಿಲ್ಲ ಎಂದು ಹೇಳಿದರು. ಆದರೆ ಇದನ್ನೇ ತಿರುಚಿ ಬೇಕಾಬಿಟ್ಟಿ ಹೇಳಿಕೆಯನ್ನು ಕೆಲವರು ನೀಡಿದ್ದಾರೆ. ನಟಿ ರಶ್ಮಿಕಾ ಮನೆಯ ಮೇಲೆ ಕೆಲ ದಿನಗಳ ಹಿಂದೆ ಐಟಿ ದಾಳಿಯಾಗಿತ್ತು. ಇದನ್ನ ತಪ್ಪಿಸಲು ಬಿಜೆಪಿ ಪರ ಅವರು ಪ್ರಚಾರಕ್ಕೆ ಇಳಿದಿದ್ದಾರೆ ಎನ್ನುವ ಅನುಮಾನವಿದೆ ಎಂದಿದ್ದಾರೆ.

ಮಾಜಿ ಶಾಸಕಿ ರೂಪಾಲಿ ನಾಯ್ಕ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿ ವಿರೋಧಿ ಎಂದು ಟೀಕಿಸಿದ್ದರು‌. ರೂಪಾಲಿ ನಾಯ್ಕ ಅವರ ಶಾಸಕರಾದ ಅವಧಿಯಲ್ಲಿಯೇ ಅಂಜಲಿ ನಿಂಬಾಳ್ಕರ್ ಸಹ ಒಟ್ಟಿಗೆ ಶಾಸಕರಿದ್ದರು. ‌ ರೂಪಾಲಿ ನಾಯ್ಕ ಅವರು ಅಂಜಲಿ ನಿಂಬಾಳ್ಕರ್ ಖಾನಾಪುರದಲ್ಲಿ, ಕ್ಷೇತ್ರದಲ್ಲಿ ಏನೇನು ಕೆಲಸ ಮಾಡಿದ್ದಾರೆಂದು ಬೇಕಾದರೆ ತಿಳಿಯಲಿ ಎಂದರು.

ಈ ಹಿಂದೆ ಶಾಸಕ ಸತೀಶ್ ಸೈಲ್ ಕ್ರಿಕೇಟ್ ಕ್ರೀಡಾಂಗಣ, ಹಲವು ಸೇತುವೆಗಳನ್ನ ಅಭಿವೃದ್ದಿಗಾಗಿ ತಂದಾಗ ಶಾಸಕರಾದ ನಂತರ ರೂಪಾಲಿ ನಾಯ್ಕ ಅದನ್ನ ತಡೆದಿದ್ದರು. ಹಾಗಾದರೆ ಅವರು ಅಭಿವೃದ್ದಿ ವಿರೋಧಿ ಅಲ್ಲವೇ. ಅಭಿವೃದ್ದಿಯ ಬಗ್ಗೆ ತಿಳಿಯದವರು ಅಭಿವೃದ್ದಿ ವಿರೋಧಿಗಳಾಗುತ್ತಾರೆ ಎಂದರು.

ಕಾಂಗ್ರೆಸ್ ಗೆಲುವು ಖಚಿತ :
ಈ ಬಾರಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದತ್ತ ಮತದಾರರು ಮತ ಚಲಾಯಿಸಿದ್ದಾರೆ ಎನ್ನುವ ವಿಶ್ವಾಸವಿದೆ. ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ ಎನ್ನುವ ನಂಬಿಕೆ ಇದೆ ಎಂದು ಶಂಭು ಶೆಟ್ಟಿ ಹೇಳಿದರು.

ಚುನಾವಣೆಯಲ್ಲಿ ಎಲ್ಲಾ ನಾಯಕರು ಒಟ್ಟಾಗಿ ಗೆಲ್ಲಿಸಲೇ ಬೇಕು ಎಂದು ದುಡಿದಿದ್ದಾರೆ. ಅಲ್ಲದೇ ಗ್ಯಾರಂಟಿ ಯೋಜನೆಯ ಲಾಭವನ್ನ ಪಡೆದವರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನ ಹಾಕಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವನ್ನ ಸಾಧಿಸಲಿದ್ದೇವೆ. ಬಿಜೆಪಿಗರು ತಾವು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಈ ಬಗ್ಗೆ ನಾವು ತಲೆ ಕೆಡೆಸಿಕೊಳ್ಳುವುದಿಲ್ಲ. ಫಲಿತಾಂಶ ಕೆಲವೇ ದಿನದಲ್ಲಿ ತಿಳಿಯಲಿದೆ ಎಂದರು.
…..

Latest Indian news

Popular Stories