ಕಾರವಾರ : ಉತ್ತರ ಕನ್ನಡ ಜಿಲ್ಲೆಯ
ಜೊಯಿಡಾ ತಾಲೂಕಿನ ರಾಮನಗರ ದಿಂದ ಗೋವಾಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಅನಮೂಡ್ ಸಮೀಪದ ಘಾಟ್ ನಲ್ಲಿ ರಸ್ತೆಯ ಅರ್ಧಭಾಗ ಸಹಿತ ಭೂ ಕುಸಿತ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ವಾಹನ ಸಂಚಾರ ಅನಮೂಡ ಹೆದ್ದಾರಿಯಲ್ಲಿ ಭಾಗದಲ್ಲಿ ದುಸ್ತರವಾಗಿದೆ ಮತ್ತು ಆತಂಕಕಾರಿಯಾಗಿದೆ. ಈ ಹೆದ್ದಾರಿಯ ಬದಲು ಬೇರೆ ರಸ್ತೆ ಬಳಸುವಂತೆ ವಾಹನ ಸವಾರರಿಗೆ ಎಸ್ಪಿ ನಾರಾಯಣ ವಿನಂತಿಸಿದ್ದಾರೆ. ಸಂಜೆ ವೇಳೆಗೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ. ಭಾರೀ ಮಳೆಯಿಂದ ಅನಮೂಡ ಘಾಟ್ ನ ಹೆದ್ದಾರಿಯಲ್ಲಿ ಭಯಾನಕ ಭೂ ಕುಸಿತ ಸಂಭವಿಸಿದೆ.