ಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಜನ ,ಬಡವರು ನೆಮ್ಮದಿ ಪಡೆದರು ; ಮಂಕಾಳ ವೈದ್ಯ

ಕಾರವಾರ: ಗ್ಯಾರಂಟಿ ಯೋಜನೆಗಳಿಂದ ಸಾಮಾನ್ಯ ಜನ ,ಬಡವರು ನೆಮ್ಮದಿ ಪಡೆದರು ಎಂದು ಮೀನುಗಾರಿಕಾ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು‌ .

ಕಾರವಾರದ ಮಯೂರ ವರ್ಮ ವೇದಿಕೆಯಲ್ಲಿ ಶನಿವಾರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು‌ .

ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಬೇಕಿತ್ತು‌ . ತುರ್ತು ಕೆಲಸದ ನಿಮಿತ್ತ ಬಂದಿಲ್ಲ. ಆದರೆ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆಂದು ಸಚಿವ ವೈದ್ಯ ಹೇಳಿದರು.

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅಸಾಧ್ಯ ಎಂದು ವಿರೋಧ ಪಕ್ಷದವರು ಆರೋಪಿಸಿದರು. ಅಪಪ್ರಚಾರ ಮಾಡಿದರು. ಆದರೆ ನಾವು ಚುನಾವಣಾ ಪೂರ್ವ ಮಾತುಕೊಟ್ಟಂತೆ ನಡೆದುಕೊಂಡಿದ್ದೇವೆ. ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ರಚನೆಯಾಗಿದೆ‌ . ಸಮೀಕ್ಷೆ ಸಹ ಮಾಡಿದ್ದೇವೆ. ಶೇ. 97 ರಷ್ಟು ಅನುಷ್ಠಾನಕ್ಕೆ ಬಂದಿದೆ. ಆರು ತಿಂಗಳಲ್ಲಿ ಸಾವಿರ ಕೋಟಿ ರೂ. ಜಿಲ್ಲೆಗೆ ಬಂದಿದೆ. ವರ್ಷಕ್ಕೆ 2000 ಕೋಟಿ ಬೇಕು. ಅದಕ್ಕೆ ಹಣದ ಕೊರತೆ ಇಲ್ಲ. 60 ಸಾವಿರ ಕೋಟಿ ಯಲ್ಲಿ ಜಿಲ್ಲೆಗೆ 2000 ಕೋಟಿ ಬೇಕು. ಸಾಮಾನ್ಯ ಜನರಿಗೆ ಗ್ಯಾರಂಟಿ ಯೋಜನೆ ತಲುಪಿಸುವುದು ಸಹ ಅಭಿವೃದ್ಧಿ ‌ . ಜನ ಗ್ಯಾರಂಟಿ ಯಿಂದ ಸ್ವಲ್ಪ ನೆಮ್ಮದಿ ಕಂಡಿದ್ದಾರೆ‌ .ನಾವು ಗ್ಯಾರಂಟಿ ಯೋಜನೆಯನ್ನು 100 ಕ್ಕೆ 100 ರಷ್ಟು ಅನುಷ್ಠಾನ ಮಾಡ್ತಿವಿ. ಆಗಲೇ ನಮಗೆ ನೆಮ್ಮದಿ ಎಂದರು.

ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡ್ತಾ ಇದೆ. ಹತ್ತು ವರ್ಷದಿಂದ ಜನರ ಖಾತೆಗೆ 15 ಲಕ್ಷ ಹಾಕಿಲ್ಲ‌ . ಆ ಹಣ ಮೊದಲು ಹಾಕಲಿ. ನಂತರ ಅವರ ಗ್ಯಾರಂಟಿ ಜಾರಿಗೆ ತರಲಿ ಎಂದು ಬಿಜೆಪಿಗೆ ಚುಚ್ಚಿದರು. ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸೀಮರು. ಅವರಿಗೆ ನಮ್ಮ‌ ಗ್ಯಾರಂಟಿ ಟೀಕಿಸಲು ನೈತಿಕತೆ ಇಲ್ಲ ಎಂದು ಸಚಿವ ಮಂಕಾಳು ಟೀಕಿಸಿದರು.

ಶಕ್ತಿ ಯೋಜನೆಯ ಪ್ರಯೋಜನ ಅಡಿ 126 ಕೋಟಿ ವೆಚ್ಚವಾಗಿದೆ. ಮಹಿಳೆಯರು ತಮಗೆ ಬೇಕಾದ ಕಡೆ ಪ್ರವಾಸ ಮಾಡಿದ್ದೀರಿ. ಅದಕ್ಕಾಗಿ ಅಭಿನಂದಿಸುವೆ. 3. 40 ಜನರು ಗೃಹಜ್ಯೋತಿ ಪ್ರಯೋಜನ ಪಡೆದಿದ್ದಾರೆ. ಬಡವರ ಮಕ್ಕಳು ಓದಲು ಅನುಕೂಲವಾಯಿತು ಎಂದರು.

ಗೃಹಲಕ್ಷ್ಮಿ ಯೋಜನೆಯಲ್ಲಿ

3.13 ಲಕ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರದಂತೆ ಕೊಟ್ಟಿದ್ದೇವೆ. ಇದಕ್ಕೆ ಈತನಕ 350 ಕೋಟಿ ವೆಚ್ಚ ಬಂದಿದೆ. ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇವೆ. ತಿಂಗಳಿಗೆ 2000 ತಲುಪಿಸಿದ್ದೇವೆ. 3651 ಜನ ಪದವಿಧರರು ಯುವನಿಧಿಗೆ ನೊಂದಾಯಿಸಿ ಕೊಂಡಿದ್ದಾರೆ. ಅವರಿಗೆ ಸರ್ಕಾರ ಕೊಟ್ಟ ಮಾತಿನಂತೆ ನೆರವು ಕೊಡ್ತಿವಿ‌ ‌. ಕಾರ್ಯಕ್ರಮದ ಆರಂಭಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸತೀಶ್ ಸೈಲ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾವಿರಾರು ಜನ ಗ್ಯಾರಂಟಿ ಫಲಾನುಭವಿಗಳು ಕಾರ್ಯಕ್ರಮದಲ್ಲಿದ್ದರು. ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಪದಾಧಿಕಾರಿಗಳಾದ ಸತೀಶ್ ನಾಯ್ಕ, ಪಾಂಡುರಂಗ ಗೌಡ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories