ಶಿರಸಿಯಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತ, ಎಫ್.ಬಿ. ಬರಹಗಾರ ರವೀಶ್ ಹೆಗಡೆ ಬಂಧನ

ಕಾರವಾರ : ಬಂಗಾರ ಆಭರಣ ಉದ್ಯಮಿ ಹಾಗೂ ಮಾಲಕ ಪ್ರೀತಮ್ ಪಾಲನಕರ ಆತ್ಮಹತ್ಯೆ ಪ್ರಕರಣ ಹಾಗೂ ಕೆಡಿಸಿಸಿ ಬ್ಯಾಂಕ್ ನಕಲಿ ಕಾಗದ ಪತ್ರ ನೀಡಿ ಕಾರು ಖರೀದಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಬ್ಲಾಕ್ ಮೇಲರ್ ಶಿರಸಿಯ ರವೀಶ್ ಹೆಗಡೆಯನ್ನ ನೇಪಾಳದ ಕಡ್ಮಂಡುವಿನಿಂದ ಬಂಧಿಸಿ ಕರೆತರಲಾಗಿದೆ ಎಂದು ಶಿರಸಿ ಪೋಲೀಸರು ತಿಳಿಸಿದ್ದಾರೆ.

ಪತ್ರಕರ್ತನ ಹೆಸರಲ್ಲಿ ಅಮಾಯಕರನ್ನು, ಕಾನೂನು ತಿಳುವಳಿಕೆ ಇಲ್ಲದವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನುವ ಆರೋಪ ಹೊತ್ತಿದ್ದಾನೆ‌ . ಅಕ್ಷಯ ಗಾರ್ಡನ್ ಮಾಲಕನಿಗೆ ಬ್ಲಾಕ್ ಮೇಲ್ ಮಾಡಿದ ಹಣ ವಸೂಲಿ ದಂಧೆ ಇಳಿದಿದ್ದ‌ ಎನ್ನುವ ಆರೋಪ ಇದೆ. ಪ್ರೀತಮ್ ಪಾಲನಕರ್ ಅವರಿಂದ 4 ಲಕ್ಷ ಹಣ ವಸೂಲಿ ಮಾಡಿದ್ದಲ್ಲದೇ, 25 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ.

ರವೀಶ್ ಹೆಗಡೆಯ ಕಿರುಕುಳಕ್ಕೆ ಶಿರಸಿಯ ಬಂಗಾರದ ಅಂಗಡಿ ಮಾಲಕ
ಪ್ರೀತಮ ಪಾಲ‌ನಕರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ, ಆತ್ಮಹತ್ಯೆ ಗೆ ಬ್ಲಾಕ್ ಮೇಲ್ ಕಾರಣ ಎಂದು ಅವರ ಕುಟುಂಬದವರು ದೂರು ನೀಡಿದ್ದರು. ಬ್ಯಾಂಕ್ ಗೆ ವಂಚಿಸಿದ ಬಗ್ಗೆ ಸಹ ದೂರುಗಳು ದಾಖಲಾಗಿದ್ದವು.

ಬ್ಲಾಕ್ ಮೇಲರ್ ನನ್ನು ಬಂಧಿಸುವಂತೆ ನಗರದ ಹಲವು ಸಂಘಟನೆಗಳು, ಜೆಡಿಎಸ್ ಮುಖಂಡ ಉಪೇಂದ್ರ ಪೈ, ಎಐಸಿಸಿ ಹಿಂದುಳಿದ ವರ್ಗದ ಸೆಲ್ ರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ್ ನಾರ್ವೇಕರ್ , ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದರು. ಅಲ್ಲದೆ ಬ್ಲಾಕ್ ಮೇಲ್ ಮಾಡುತ್ತಿದ್ದ, ನಕಲಿ ಪತ್ರಕರ್ತನನ್ನು ಬಂಧಿಸದಿದ್ದರೆ ಶಿರಸಿ ಬಂದ್ ಮಾಡುವುದಾಗಿ ಎಚ್ಚರಿಸಿದ್ದರು.

ಕಳೆದ ಕೆಲ ದಿನಗಳಿಂದ ಆರೋಪಿ ಬಂಧನಕ್ಕಾಗಿ ಶಿರಸಿ ಪೊಲೀಸರು ಹುಡುಕಾಟ ನಡೆಸಿದ್ದು, ಸಿ.ಪಿ.ಐ. ಶಶಿಕಾಂತ ವರ್ಮಾ ನೇತೃತ್ವದಲ್ಲಿ ಪಿ.ಎಸ್.ಐ. ನಾಗಪ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಯನ್ನು ನೇಪಾಳದಿಂದ ಹಿಡಿದು ತಂದಿದ್ದಾರೆ. ಈಗ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
……

Latest Indian news

Popular Stories