ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ

ಕಾರವಾರ: ಕುಡಿದ ನಶೆಯಲ್ಲಿ ರೈಲ್ವೆ ಪ್ಲಾಟ್ ಫಾರ್ಮ್ ಬಳಿ ಕುಳಿತು ಹುಚ್ಚಾಟ ಮೆರೆಯುತ್ತಿದ್ದ ವ್ಯಕ್ತಿಗೆ ರೈಲ್ವು ಬಡಿದು ಆತನ ಕೈ ತುಂಡಾಗಿರುವ ಘಟನೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ದೇವಿದಾಸ್ ಮೊಗೇರ ಎಂಬಾತ ಭಟ್ಕಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಅಡ್ಡಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ರೈಲು ಚಲಿಸುವಾಗಲು ಪ್ಲಾಟ್‌ಫಾರ್ಮ್ ಬಳಿ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮುರುಡೇಶ್ವರದಿಂದ ಬೆಂಗಳೂರಿಗೆ ಚಲಿಸುವ ರೈಲು ಭಟ್ಕಳದ ಪ್ಲಾಟ್ ಫಾರ್ಮ್ ಮೇಲೆ ನಿಂತಿದ್ದ ದೇವಿದಾಸ್ ಎಂಬಾತನಿಗೆ ತಗುಲಿದೆ.

ಪರಿಣಾಮ ಈತ ರೈಲ್ವೆ ಕೆಳಭಾಗದಲ್ಲಿ ಸಿಲುಕಿದ. ಪರಿಣಾಮ ಆತನ ಕೈ ತುಂಡಾಗಿದ್ದು, ಆತನ ಕೈ ತುಂಡಾಗಿ ಬಿದಿದ್ಧೆ. ದೇವುದಾಸಗೆ ಭಟ್ಕಳ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Latest Indian news

Popular Stories