ಸಿಎಂ ಪತ್ನಿ ಮುಡಾ ಸೈಟ್ ವಾಪಾಸ್ ಮಾಡಿದ್ದು ಅವರ ಪರಿಶುದ್ಧ ಮನಸು ಎಂದ ಸಚಿವರು
ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟ್ ವಾಪಾಸ್ ಮಾಡಿದ್ದು ಅವರ ದೊಡ್ಡ ಮನಸ್ಸು ಹಾಗೂ ಪ್ರಾಮಾಣಿಕತೆ ತೋರುತ್ತದೆ. ಪರಿಶುದ್ಧ ಮನಸ್ಸಿನವರ ಮೇಲೆ ಸುಳ್ಳು ಆರೋಪ ಮಾಡಿದರೆ , ಹೆಚ್ಚು ನೋವಾಗುತ್ತದೆ. ಸಿ. ಎಂ. ಪತ್ನಿ ಅವರು 3 ಎಕರೆ, 18 ಗುಂಟೆ ಭೂಮಿಗೆ ಪರ್ಯಾಯವಾಗಿ ಮುಡಾದವರು ಕೊಟ್ಟ ಸೈಟ್ ಪಡೆದಿದ್ದರು. ಈಗ ಅದನ್ನು ವಾಪಾಸ್ ಮಾಡಿದ್ದು, ವಿನಾಕಾರಣ ಪತಿ ಸಿದ್ದರಾಮಯ್ಯ ಅವರ ಮೇಲೆ ಬಂದ ಆರೋಪಕ್ಕೆ ಎಂಬುದು ತೆರೆದ ಸತ್ಯ ಎಂದರು.
ಕಾರವಾರದಲ್ಲಿ ಅವರು ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದರು.ಬಿಜೆಪಿಯವರು ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ಸುಳ್ಳು ಅಪಾದನೆ ಮಾಡುವುದು ಬಿಡಬೇಕು ಎಂದು ಸಚಿವ ವೈದ್ಯ ಮನವಿ ಮಾಡಿದರು.
ಬಿಜೆಪಿಯವರು ಇನ್ನಾದರೂ ಸುಳ್ಳು ಪ್ರಚಾರ ಮಾಡುವುದನ್ನು ಬಿಡಿ,ಸರ್ಕಾರ ಕೆಲಸ ಮಾಡಲು ಕೊಡಿ ಎಂದ ಸಚಿವ ಮಂಕಾಳು ವೈದ್ಯ ಅವರು ಮುಡಾದಲ್ಲಿನ 360 ಕೋಟಿ ಅನುದಾನ ಬಳಕೆ ಮಾಡಿದ್ದು, ಬಳಕೆಗೆ ಅನುಮತಿ ನೀಡಿದ್ದು ಬಿಜೆಪಿ ಬೊಮ್ಮಾಯಿ ಸರ್ಕಾರ ಎಂದರು.ಕ್ಯಾಬಿನೆಟ್ ನಿರ್ಧಾರಗಳ ಅನ್ವಯ ಅಭಿವೃದ್ಧಿ ಕೆಲಸ ಮಾಡಲು ಯಾವ ಅಡ್ಡಿಯೂ ಇಲ್ಲ ಎಂದು ಸಚಿವ ವೈದ್ಯ ಹೇಳಿದರು.
……