ಕಾರವಾರ: ಬಿಜೆಪಿ ಶಾಸಕ ಮುನಿರತ್ನ ಮಾತನಾಡಿರುವ ಮಾತು ಅವರಿಗೆ ಗೌರವ ತರುವಂಥದ್ದಲ್ಲ ಎಂದು ಹಿರಿಯ ಕಾಂಗ್ರೆಸ್ ಧುರೀಣ , ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ವರ್ಷದಲ್ಲಿ ಏಳು ದಿನ ಮಾತ್ರ ತೆರೆಯುವ ಸಾತೇರಿ ದೇವಿ ಜಾತ್ರೆ ನಿಮಿತ್ತ ಸಾತೇರಿ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಶಾಸಕ ಮುನಿರತ್ನ ಮಾತನಾಡಿರುವ ಮಾತು, ಬಳಸಿರುವ ಭಾಷೆ ಮುಖ್ಯವಾಗಿ ಅವರಿಗೆ ಗೌರವ ತರುವುದಲ್ಲ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ .ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.
ಮಾನವನಾಗಿ ಹುಟ್ಟಿದ ನಂತರ ಮಾನವನಾಗಿ ಬಾಳ ಬೇಕು. ಮಾನವನು ಭಾಷೆ ಸರಿಯಿರಬೇಕು. ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಜವಬ್ದಾರಿಯಿಂದ ಮಾತನಾಡಬೇಕು ಎಂದರು.
ಮುನಿರತ್ನ ಶಾಸಕರಿದ್ದಾರೆ, ಹಿಂದೆ ಸಚಿವರಾಗಿದ್ದವರು. ಆದರೆ ಅವರೇ ಕಾನೂನು ಉಲ್ಲಂಘನೆ ಮಾಡಿದರೆ ಪೊಲೀಸರು ಏನು ಮಾಡಬೇಕು ?. ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. ಜನಾಂಗ ನಿಂದನೆ, ಜಾತಿ ನಿಂದನೆ ಎಂಬುದು ನಾನ್ ಬೇಲಬಲ್ ಕೇಸ್ ಆಗಿದ್ದು, ಅವರು ಬಳಸಿದ ಶಬ್ದ ಪ್ರಯೋಗ ಸರಿಯಾದುದಲ್ಲ, ಎಲ್ಲರ ಮೇಲೆ ಜವಬ್ದಾರಿ ಇದೆ, ಅವರು ಮಾತನಾಡಿದ್ದು ತಪ್ಪು ಎಂದರು.
…..