ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಅತೀ ಮುಖ್ಯ : ಅಣ್ವೇಕರ್

ಕಾರವಾರ : ಸರ್ಕಾರವು ಯಾವುದೇ ಹೊಸ ಯೋಜನೆಗಳನ್ನು ರೂಪಿಸುವಾಗ ನಿಖರವಾದ ಅಂಕಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತೀ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಅಣ್ವೇಕರ್ ಹೇಳಿದರು.

ಅವರು ಪ್ರಖ್ಯಾತ ಸಂಖ್ಯಾ ಶಾಸ್ತಜ್ಞ ಪ್ರೊ. ಪಿ. ಸಿ. ಮಹಾಲನೋಬಿಸ್ ಜನ್ಮ ದಿನದ ಅಂಗವಾಗಿ ಕಾರವಾರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ನಡೆದ 18 ನೇ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಖ್ಯಾ ಶಾಸ್ತಜ್ಞ ಪ್ರೊ. ಪಿ. ಸಿ. ಮಹಾಲನೋಬಿಸ್‌ರವರ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಸರ್ಕಾರವು ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಸಂಖ್ಯೆಗಳ ಪ್ರಾಮುಖ್ಯತೆಯನ್ನು ವಿವರಿಸಿ ನಿಖರವಾದ, ನಂಬಲರ್ಹ ಅಂಕಿ ಅಂಶಗಳನ್ನು ಕಾಲಮಿತಿಯೊಳಗಾಗಿ ಸಂಗ್ರಹಿಸಿ ವಿಶ್ಲೇಷಣಾ ವರದಿಯನ್ನು ಪ್ರಕಟಿಸುವಲ್ಲಿ ಸಾಂಖ್ಯಿಕ ಇಲಾಖೆಯ ಪಾತ್ರ ಮಹತ್ವದಾಗಿದ್ದು, ಸಾಂಖ್ಯಿಕ ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೋಮಶೇಖರ ಮೇಸ್ತ ಮಾತನಾಡಿ, ಸಂಖ್ಯಾ ಶಾಸ್ತಜ್ಞ ಪ್ರೊ. ಪಿ. ಸಿ. ಮಹಾಲನೋಬಿಸ್‌ರವರ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತಾ ಜಿಲ್ಲೆಯಲ್ಲಿ ಸಾಂಖ್ಯಿಕ ಇಲಾಖಾ ವತಿಯಿಂದ ಕೈಗೊಳ್ಳಲಾಗುವ ಜನನ-ಮರಣ ನೋಂದಣಿ, ಕೃಷಿ ಅಂಕಿ ಅಂಶಗಳು, ಬೆಳೆ ಅಂದಾಜು ಸಮೀಕ್ಷೆ, ಸಕಾಲಿಕ ವರದಿ ಯೋಜನೆಯಡಿ ಬೆಳೆ ಸಮೀಕ್ಷೆ ಮೇಲ್ವಿಚಾರಣೆ, ಬೆಲೆ ವರದಿ, ಕೃಷಿ ಕೂಲಿ ವರದಿಗಳು, ಹಣ್ಣು ತರಕಾರಿ ಸಮೀಕ್ಷೆ, ಧಾರಣಿ ವರದಿ, ರಾಷ್ಟಿಯ ಮಾದರಿ ಸಮೀಕ್ಷೆ, ಜಿಲ್ಲಾ ಅಂಕಿ ಅಂಶ ನೋಟದ ಪ್ರಕಟಣೆ ಮುಂತಾದ ಮಹತ್ವದ ಕಾರ್ಯಗಳ ಕುರಿತು ವಿವರಿಸಿದರು.

ಸಹಾಯಕ ಸಾಂಖ್ಯಿಕ ಅಧಿಕಾರಿ ಸಿ.ಎಸ್.ಬಣಕಾರ್‌ , ಅಶ್ವಿನಿ ಮೇಸ್ತ ಸರೋಜಿನಿ ನಾಯ್ಕ ಶಿಲ್ಪಾ ಗೌಡ ಉಪಸ್ಥಿತರಿದ್ದರು.

……..

Latest Indian news

Popular Stories