ಕಾರವಾರ : ಇಲ್ಲಿನ ರೋಟರಿ (ಪಶ್ಚಿಮ) ಕ್ಲಬ್ ರವಿವಾರ ಆಯೋಜಿಸಿದ್ದ ವಾಕಥಾನ್ ಯಾಶಸ್ವಿಯಾಗಿ ಜರಿಗಿತು.
ಕಾರವಾರ ರೋಟರಿ ಪಶ್ಚಿಮ ಕ್ಲಬ್ ಸಮಾಜ ಸೇವೆಗೆ ಸಹಾಯ ವಾಗುವ ನಿಟ್ಟಿನಲ್ಲಿ ಕಳೆದ 4 ವರ್ಷದಿಂದ ವಾಕಥಾನ್ ಹಮ್ಮಿಕೊಳ್ಳುತ್ತಿದ್ದು, 2024 ರ ವಾಕ್ ಥಾನ್ ನನ್ನು ರವಿವಾರ ನಡೆಸಿತು. ಕಾರವಾರದ ಮಾಲಾದೇವಿ ಕ್ರೀಡಾಂಗಣ ದಿಂದ ಆರಂಭವಾದ ವಾಕ್ ಥಾನ್ ನಲ್ಲಿ ಒಟ್ಟು 600 ಜನರು ಭಾಗವಹಿಸಿದ್ದರು.
ಹತ್ತು ಕಿ.ಮೀ ನಡಿಗೆಯಲ್ಲಿ 15 ವರ್ಷದೊಳಗಿನ ವಿಭಾಗದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಮುಲ್ಲಾ ಪ್ರಥಮ, ಆದಿತ್ಯ ಪಾಟೀಲ್ ದ್ವೀತಿಯ ಸ್ಥಾನ ಪಡೆದರು. ಮಕ್ಕಳ ವಿಭಾಗದಲ್ಲಿ ಶರಷ್ಟಿ ನಾಯ್ಕ್ ಪ್ರಥಮ್, ಪೂರ್ವಿ ಹರಿಕಾತ್ರ ದ್ವಿತೀಯ ಸ್ಥಾನ ಗಳಿಸಿದರು.
16 ರಿಂದ 35 ವರ್ಷ ವಯಸ್ಸಿನಲ್ಲಿ ಸಂಪತ್ ರೋನಾಲ್ಡ್ ಪ್ರಥಮ ಗೂ ಹರಿ ವೇಲಿಪ್ ದ್ವಿತೀಯ ಸ್ಥಾನ ಪಡೆದರು.
ಯುವತಿಯರ ವಿಭಾಗದಲ್ಲಿ ಚಂದ್ರಿಕಾ ಗೌಡ ಪ್ರಥಮ, ಸುರಕ್ಷಾ ದ್ವಿತೀಯ ಸ್ಥಾನ ಪಡೆದರು.36 ದಿಂದ 59 ವರ್ಷದ ವರಗೆ ವಾಕ್ ಥಾನ್ ನಲ್ಲಿ ಪ್ರಥಮ ಸ್ಥಾನ ಪ್ರಶಾಂತ್ನಾಯ್ಕ್, ದ್ವಿತೀಯ ಸ್ಥಾನ ಪ್ರಶಾಂತ್ ತೆಂಡೂಲ್ಕರ್, ಮಹಿಳೆಯರ ವಿಭಾಗದಲ್ಲಿ ಗೀತಾ ಪೈ ಪ್ರಥಮ , ಮಂಜು ಸಜೀಮನ್ ದ್ವಿತೀಯ ಸ್ಥಾನ ಗಳಿಸಿಕೊಂಡರು.
60 ವರ್ಷ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ನರಸಿಂಹ ಕೊಳಂಕರ್ ಪ್ರಥಮ, ಉದಯ್ ನಾಯ್ಕ್ ದ್ವಿತೀಯ ಸ್ಥಾನವನ್ನು, ಹಿರಿಯ ನಾಗರಿಕರ ವಿಭಾಗದಲ್ಲಿ ರೋಸಾಲಿನ್ ಫೆರ್ನಾಂಡಿಸ್ ಪ್ರಥಮ ಸ್ಥಾನ ಪಡೆದರು.ವಾಕ್ ಥಾನ್ ಗೆ ದಿನಕರ್ ಸಾಳುಂಕೆ ಹಾಗೂ ರೋಟರಿಯನ್ ಅರವಿಂದ ನಾಯಕ ದ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ವಾಕ್ ಥಾನ್ ಗೆದ್ದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಗಳಾದ ಸಂತೋಷ್ ಬೋರ್ಕರ್, ತುಳಸಿದಾಸ್ ಕಾಮತ್, ಜಾರ್ಜ್ ಫೆರ್ನಾಂಡಿಸ್, ದಿನಕರ್ ಸಾಳುಂಕೆ, ರೋಟರಿಯನ್ ಜೈದೀಪ್ ಪಾಟೀಲ್, ಡಾಲ್ರೇಚ್ ಫೆರ್ನಾಂಡಿಸ್, ಬಹುಮಾನ ವಿತರಿಸಿದರು. ರೋ. ಅರವಿಂದ ನಾಯಕ, ಶಿವಾನಂದ್ ನಾಯ್ಕ್, ರಾಜು ಪಾಟೀಲ್, ಪ್ರಜ್ಞಾ ಪಾಟೀಲ್, ಜಿತೇಂದ್ರ ತನ್ನ, ಮೆಹಬೂಬ್, ಅಜಯ್ ಶೆಟ್ಟಿ, ಲಷ್ಮಿಕಾಂತ್, ದಿನೇಶ್, ಪ್ರದೀಪ್ ಹಾಗೂ ಇತರೆ ರೋಟರಿಯನ್ಸ್ ಕಾರ್ಯಕ್ರಮದಲ್ಲಿದ್ದರು.
……..