ಕಾರವಾರ (ಮುಂಡಗೋಡ) : ಬೆಂಗಳೂರು ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಹಿಂದೆ ರಾಜಕೀಯ ಪಕ್ಷದ ಸಂಚು ಇರಬಹುದು. ಇದು ಚುನಾವಣೆಗಾಗಿ ಬಿಜೆಪಿಯವರೆ ಮಾಡಿರುವ ಸಂಚು ಎಂಬ ಸಂಶಯ ಇದೆ ಎಂದು ಸಚಿವ ಮಂಕಾಳು ವೈದ್ಯ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಮುಂಡಗೋಡದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ ಚುನಾವಣೆಗಾಗಿ ಬಿಜೆಪಿಯವರು ಏನ್ ಬೇಕಾದ್ರೂ ಮಾಡ್ತಾರೆ. ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಈ ಸಂಚು ಮಾಡಲಾಗಿದೆ. ಇದನ್ನ ಯಾರು, ಯಾವ ಪಕ್ಷದವರು ಮಾಡ್ತಾರೆ ಅಂತಾ ಎಲ್ಲರಿಗೂ ಗೊತ್ತಿದೆ.ಯಾರೂ ಭಯ ಪಡುವ ಅಗತ್ಯವಿಲ್ಲ.ಈ ಕೃತ್ಯ ಯಾರೇ ಮಾಡಿದ್ದರು ನಮ್ಮ ಸರ್ಕಾರ ಖಂಡಿತವಾಗಿ ಕಠಿಣ ಕ್ರಮ ಜರುಗಿಸುತ್ತದೆ ಎಂದರು. ಬಿಜೆಪಿಯವರು ಇದುವರೆಗೆ ಯಾವ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಮಾತಾನಾಡಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಬಡವರ ಪರವಾಗಿ ಯಾವ ಕಾರ್ಯಕ್ರಮ ನೀಡಿ ಚುನಾವಣೆ ಎದುರಿಸಿದ್ದಾರಾ ? ಅವರು ಇದುವರೆಗೂ ಧರ್ಮ ಮತ್ತು ಮನುಷ್ಯರ ನಡುವೆ ದ್ವೇಷ ಬಿತ್ತಿ ಚುನಾವಣೆ ಎದುರಿಸಿಕೊಂಡು ಬಂದಿದ್ದಾರೆ. ಈ ಬಾರಿ ಸಹ ಅದನ್ನೇ ಮಾಡತ್ತಿದ್ದಾರೆಂದು ಸಚಿವ ಮಂಕಾಳು ವೈದ್ಯ ಆರೋಪಿಸಿದರು.
…….