ತದಡಿ ಬಳಿ ಮುಳಗಿದ ಪ್ರವಾಸಿಗರ ಬೋಟ್‌: ಅಪಾಯದಿಂದ ಪಾರಾದ ಪ್ರವಾಸಿಗರು

ಕಾರವಾರ: ಗೋಕರ್ಣ ಸಮುದ್ರ ವ್ಯಾಪ್ತಿಯ ತದಡಿ ಎಂಬಲ್ಲಿ 40 ಜನ ಪ್ರವಾಸಿಗರು ಇದ್ದ ಬೋಟ್ ಮುಳಗಿದ್ದು, ಕರಾವಳಿ ಕಾವಲು ಪಡೆ ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರವಾಸಿಗರನ್ನು ರಕ್ಷಿಸಿದೆ. ಸ್ಥಳೀಯರು ಹಾಗೂ ಕರಾವಳಿ ಕಾವಲು ಪಡೆಯ ತತ್ ಕ್ಷಣದ ನೆರವು ಪ್ರವಾಸಿಗರ ಜೀವ ಉಳಿಸಿದೆ .

ಪ್ರವಾಸಿ ಬೋಟ್ ಎಂ.ಗಣೇಶ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಬೋಟ್ ಗೆ ಹೆಚ್ಚಿನ ಪ್ರವಾಸಿಗರನ್ನು ತುಂಬಿದ ಪರಿಣಾಮ ಬೋಟ್ ಮುಳುಗಿತು ಎನ್ನಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಜಾ ದಿನವಾದ್ದರಿಂದ ಗೋಕರ್ಣ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಸಮುದ್ರ ಪರಿಚಯ ಇಲ್ಲದವರು ಅಲೆಗಳಿಗೆ ಬಲಿಯಾಗತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ.


ಪ್ರವಾಸಿಗರ ದಟ್ಟಣೆ ಸಹ ದುರಂತಕ್ಕೆ ಕಾರಣವಾಗುತ್ತಿವೆ ಎಂದು ಸ್ಥಳೀಯ ಪ್ರಜೆಗಳು ಹೇಳುತ್ತಿದ್ದಾರೆ‌.

1001092343 Uttara Kannada


….

Latest Indian news

Popular Stories