ಅಪ್ರಾಪ್ತ ಬಾಲಕನಿಂದ ದ್ವಿಚಕ್ರ ವಾಹನ ಚಾಲನೆ ಹಾಗೂ ಅಪಘಾತ: ವಾಹನ ಮಾಲಕರಿಗೆ 30 ಸಾವಿರ ದಂಡ

ಕಾರವಾರ : ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿ, ಪಾದಚಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಪ್ರಕರಣದಲ್ಲಿ ವಾಹನ ಮಾಲಕರಿಗೆ 30 ಸಾವಿರ ದಂಡ ವಿಧಿಸಿ ಕಾರವಾರ ಹಿರಿಯ ಸಿವಿಲ್ ಹಾಗೂ ಸಿಜೆಎಂ ನ್ಯಾಯಾಧೀಶೆ ಆದೇಶ ಹೊರಡಿಸಿದರು.

ಶುಕ್ರವಾರ ಈ ತೀರ್ಪು ಕಾರವಾರ ಸಿಜೆಎಂ ನ್ಯಾಯಾಧೀಶೆ ರೇಶ್ಮಾ ರೋಡ್ರಿಗಸ್ ಅವರಿಂದ ಪ್ರಕಟವಾಗಿದೆ .
ಕಾರವಾರದ ಮುರುಳೀಧರ ಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡುವ ಅಪಘಾತ ಮಾಡಿದ್ದ. ಅಪ್ರಾಪ್ತ ನಾದ ಕಾರಣ ಬಾಲ ನ್ಯಾಯಾಮಂಡಳಿಗೆ ಈ ಪ್ರಕರಣ ವರ್ಗಾವಣೆ ಅಗಿತ್ತು. ಬಾಲಕನಿಗೆ 6500 ರೂ. ದಂಡ ಹಾಕಲಾಗಿದೆ. ದ್ವಿಚಕ್ರ ವಾಹನ ಆರ್ .ಸಿ. ಬುಕ್ ಹೊಂದಿದವರಿಗೆ ರೂ. 30,000 ದಂಡ ವಿಧಿಸಲಾಗಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ದೇವೇಂದ್ರ ನಾಯ್ಕ. ಎಂ. ಅವರು ತಿಳಿಸಿದ್ದಾರೆ.
……………….

Latest Indian news

Popular Stories