ಉ.ಕ | ಮೀನು ಮಾರುಕಟ್ಟೆ ರಸ್ತೆಯಲ್ಲಿ ವಿವಾಹಿತ ವ್ಯಕ್ತಿಯ ಶವವೊಂದು ಪತ್ತೆ

ಕಾರವಾರ : ದಾಂಡೇಲಿ ನಗರದ ಮೀನು ಮಾರುಕಟ್ಟೆ ರಸ್ತೆಯಲ್ಲಿ ವಿವಾಹಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ‌.

ಮೃತ ವ್ಯಕ್ತಿ ನಗರದ ಡಿ.ಎಫ್.ಎ ಟೌನಶಿಪ್ ನಿವಾಸಿ ಡಾಸನ್ ಡಿಸೋಜಾ ಎಂದು ಗುರುತಿಸಲಾಗಿದೆ. ಈತ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ ಎನ್ನಲಾಗಿದೆ. ಮೃತ್ಯ ವ್ಯಕ್ತಿ ಮದ್ಯ ವ್ಯಸನಿಯಾಗಿದ್ದು, ವಿಪರೀತ ಮದ್ಯ ಸೇವನೆ ಮಾಡಿದ್ದರಿಂದ ಮಲಗಿದ್ದಲ್ಲೆ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐ ರವೀಂದ್ರ ಬಿರದಾರ, ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ಥಳೀಯರಾದ ಪ್ರಕಾಶ್ ಗೊಂಧಳಿಯವರ ಸಹಕಾರದಲ್ಲಿ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
……

Latest Indian news

Popular Stories