ಉ.ಕ | ರಸ್ತೆ ಅಪಘಾತದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ ಸಾವು


ಕಾರವಾರ: ರಸ್ತೆ ಅಪಘಾತದಲ್ಲಿ ಬಂಡಲ ಬಡಗಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ವಿಜಯಾ ಬೋವಿ (40) ಸಾವು ಕಂಡ ಘಟನೆ ಇಂದು ನಡೆದಿದೆ.


ಶಿರಸಿಯಿಂದ ಗಂಡನ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಬೈಕ್ ನಿಂದ ಆಯ ತಪ್ಪಿ ನಗರ ಸಭೆಯ ಟಿಪ್ಪರ್ ಅಡಿಗೆ ಬಿದ್ದ ಘಟನೆ ನಡೆದಿದೆ. ಪರಿಣಾಮ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರಸಿ ಮಿರ್ಜಾನ್ ಕರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು,ಪ್ರಕರಣ ದಾಖಲಿಸಿದ್ದಾರೆ. ಶಿಕ್ಷಕಿ ಸಾವಿಗೆ ಶಿಕ್ಷರ ವಲಯದಲ್ಲಿ ದುಃಖ ಮಡುಗಟ್ಟಿದೆ.

Latest Indian news

Popular Stories