ಉ.ಕ| ಹಳ್ಳದ ಪಂಪ್ ಸೆಟ್ ವಿದ್ಯುತ್ ಕಡಿತಕ್ಕೆ ರೈತರ ವಿರೋಧ : ಸರ್ಕಾರದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಬೆಂಬಲ ಘೋಷಣೆ

ಕಾರವಾರ : ಡೊಂಗ್ರಿ ಪಂಚಾಯತ್ ಹಳವಳ್ಳಿಯ ಸುತ್ತಮುತ್ತಲಿನ ರೈತರ ಪಂಪ್ ಸೆಟ್ ಕನೆಕ್ಷನ್ ಕೆಇಬಿ ಅಧಿಕಾರಿಗಳು ಕಟ್ ಮಾಡಿದ್ದು ಇದರಿಂದ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಹಸೇಹಳ್ಳ‌ ನೀರಾವರಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಸದಾನಂದ ಭಟ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಅಂಕೋಲಾ ತಾಲೂಕಿನ ಹಳವಳ್ಳಿ ಮುಲನಿವಾಸಿ ಗ್ರಾಮ ವ್ಯಾಪ್ತಿಯಲ್ಲಿ ಕನಕನಹಳ್ಳಿ, ಸಾತೋಬೈಲು ಸೇರಿದ ಸುತ್ತಮುತ್ತಲಿನ ಜನರು ಹಸೆಹಳ್ಳದ ನೀರನ್ನ ಬಳಕೆ ಮಾಡಿಕೊಂಡು ಬರುತ್ತಿದ್ದೇವೆ.

ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಹಸೆಹಳ್ಳದ ನೀರು ಬಳಸಿ ಕೃಷಿ ಮಾಡಿ ಸಾವಿರಕ್ಕೂ ಅಧಿಕ ಜನರು ಜೀವನ ಸಾಗಿಸುತ್ತಾ ಬಂದಿದ್ದೆವು. ಆದರೆ ಕೆಲ ದಿನದ ಹಿಂದೆ ಹಳ್ಳಕ್ಕೆ ಹಾಕಿದ್ದ ಪಂಪ್ ಸೆಟ್ ಕನೆಕ್ಷನ್ ರದ್ದು ಮಾಡಲಾಗಿದೆ. ಕೆಇಬಿ ಅಧಿಕಾರಿಗಳು ರದ್ದು ಮಾಡಿದ್ದು ಇದರಿಂದ ಕೃಷಿ ಬಳಕೆ ನೀರಿಲ್ಲದೇ ಜನರು ಪರದಾಟ ನಡೆಸುತ್ತಿದ್ದೇವೆ ಎಂದರು.

ಹಳವಳ್ಳಿ ಸುತ್ತಮುತ್ತಲಿನ ಗ್ರಾಮದ ಜನರು ಮೂಲನಿವಾಸಿಗಳು ಹಾಗೂ ಕಾಳಿ ನದಿ ವಿದ್ಯುತ್ ಯೋಜನೆಯಿಂದ ನಿರಾಶ್ರಿತರಾಗಿ ಬಂದ ಹಲವರು ಗ್ರಾಮದ ಸುತ್ತಮುತ್ತಲಿನಲ್ಲಿ ವಾಸಿಸುತ್ತಿದ್ದಾರೆ.

ಆದರೆ ಕಿಸಾನ್ ಸಂಘದ ಅಧ್ಯಕ್ಷರು ಎನ್ನಲಾದ ಶಿವರಾಮ್ ಗಾಂವಕರ್ ಹಳ್ಳಕ್ಕೆ ಹಾಕಿದ್ದ ಪಂಪ್ ಸೆಟ್ ಅಕ್ರಮ ಕನೆಕ್ಷನ್ ತೆಗೆಯುವಂತೆ ಮನವಿ ಮಾಡಿದ್ದರಿಂದ ಕೆಇಬಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ ಎಂದು ದಿನಕರ ಹೆಬ್ಬಾರ ದೂರಿದರು. ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. 30 ಜನರ ಸಲುವಾಗಿ ಶಿವರಾಮ ಗಾಂವ್ಕರ್ 300 ಜನರ ಮೇಲೆ ವಿನಾಕಾರಣ ದೂರು ನೀಡಿದ್ದಾರೆ. ಅವರನ್ನು ಕಿಸಾನ್ ಸಂಘದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕೆಂದು ರಾಜ್ಯಾಧ್ಯಕ್ಷರಿಗೆ ಮನವಿ ಮಾಡುತ್ತೇವೆ ಎಂದರು. ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ಅವರು ಪ್ರಕಟಿಸಿದರು‌‌ ‌.

ಬೇಸಿಗೆಯಲ್ಲಿ ಹಸೆಹಳ್ಳದ ನೀರನ್ನ ಬಳಸಿಕೊಂಡು ಜನರು ಬದುಕುತ್ತಿದ್ದಾರೆ. ಮಳೆಗಾಳದಲ್ಲಿ ಬಾವಿಗಳು ತುಂಬಿರುವುದರಿಂದ ಆಗ ನೀರಿನ ಸಮಸ್ಯೆ ಆಗುವುದಿಲ್ಲ. ಸದ್ಯ ನೀರಿನ ಸಮಸ್ಯೆ ಇರುವ ವೇಳೆಯಲ್ಲಿ ಪಂಪ್ ಸೆಟ್ ಕನೆಕ್ಷನ್ ತೆಗೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ‌.

ನಾವು ಗ್ರಾಮದ ಮೂಲ ನಿವಾಸಿಗಳು. ನಮ್ಮೊಟ್ಟಿಗೆ ನಿರಾಶ್ರಿತರು ಜೀವನ ನಡೆಸುತ್ತಿದ್ದಾರೆ.‌ ನೀರಿನ ಸಮಸ್ಯೆ ಆಗಲಿದೆ ಎಂದು ಕೃಷಿ ಪಂಪ್ ಸೆಟ್ ವಿದ್ಯುತ್ ತೆಗೆದರೆ ಜನರು ಬೇಸಿಗೆಯಲ್ಲಿ ಜೀವನ ಸಾಗಿಸಲು ಹೇಗೆ ಸಾಧ್ಯ.‌ಕಿಸಾನ್ ಸಂಘದ ಅಧ್ಯಕ್ಷರು ರೈತ ವಿರೋಧಿ ನೀತಿ ನಡೆಸಿದ್ದಾರೆ ಎಂದರು.

ಗಂಗಾವಳಿ ನದಿಯಿಂದ ನೌಕಾದಳ ವ್ಯಾಪ್ತಿಯಲ್ಲಿ ವಾಸಿಸುವ ಸಿಬ್ಬಂದಿಗಳ ಮನೆಗಳಿಗೆ ನೀರನ್ನ ಒದಗಿಸುವ ಯೋಜನೆ ಮಾಡಲಾಗುತ್ತಿದೆ. ಮಳೆಗಾಲ ಆಗಿರುವುದರಿಂದ ನೀರಿನ ಸಮಸ್ಯೆ ಆಗದಂತೆ ರೈತರ ಪಂಪ್ ಸೆಟ್ ಗಳ ವಿದ್ಯುತ್ ತೆಗೆದರೆ ರೈತರು ಬದುಕುವುದು ಹೇಗೆ. ಇದರ ಹಿಂದೆ ದೊಡ್ಡ ಹುನ್ನಾರವಿದೆ ಎಂದರು.

ಇಡೀ ಉತ್ತರ ಕನ್ನಡದಲ್ಲಿ ಹಳ್ಳದಿಂದ ನೀರನ್ನ ಬಳಸಿ ಕೃಷಿ ಬಳಕೆ ಮಾಡುತ್ತಿರುವವರ ಸಂಖ್ಯೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರು ಇದ್ದಾರೆ. ಎಲ್ಲರ ಪಂಪ್ ಸೆಟ್ ಗೆ ಹಾಕಿರುವ ವಿದ್ಯುತ್ ತೆಗೆದರೆ ಹೇಗೆ ಜಿಲ್ಲೆಯಲ್ಲಿ ಕೃಷಿ ಮಾಡಲು ಸಾಧ್ಯ. ನೀರಿಗಾಗಿ ನಾವು ಎಲ್ಲಾ ತೆರಿಗೆಯನ್ನ ಕಟ್ಟಲು ಸಿದ್ದರಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಿತ್ಯಾನಂದ ಭಟ್, ರೋಹಿದಾಸ ನಾಯ್ಕ, ದಿನಕರ ಹೆಬ್ಬಾರ್, ಸಂತೋಷ್ ಭಟ್, ಪ್ರಭಾಕರ್ ಮರಾಠೆ, ವಿನಯ್ ಹೆಗಡೆ, ಸೂರ್ಯ ಸಿದ್ದಿ, ಪ್ರಶಾಂತ ನಾಯ್ಕ ಉಪಸ್ಥಿತರಿದ್ದರು.
…‌…

Latest Indian news

Popular Stories