ಉ.ಕ | ಗ್ಯಾಸ್ ಸಿಲಿಂಡರ್ ಸ್ಪೋಟ: ಮನೆಯ ವಸ್ತುಗಳಿಗೆ ಹಾನಿ

ಸಾಂದರ್ಭಿಕ ಚಿತ್ರ

ಕಾರವಾರ: ಇಲ್ಲಿನ ನಂದನಗದ್ದಾ ಪ್ರದೇಶದ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿ ಮನೆಯ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ೨-೩೦ ರ ಸುಮಾರಿಗೆ ನಡೆದಿದೆ.

ಮನೆಯ ಮಾಲಕ ನಿಲೇಶ್ ತಳೇಕರ್ ಅವರಿಗೆ ಗಾಯಗಳಾಗಿವೆ. ಅವರು ಅಡುಗೆ ಮಾಡುವ ವೇಳೆ ಸಿಲೆಂಡರ್ ಸ್ಪೋಟವಾಗಿದೆ. ಅಡುಗೆ ಮನೆಯ ವಸ್ತು, ಪೀಠೋಪಕರಣ, ವಾಶಿಂಗ್ ಮಿಶನ್ ಸುಟ್ಟಿವೆ. ಆಗ್ನಿಶಾಮಕ ದಳ ಆಗಮಿಸಿ, ಬೆಂಕಿ‌ ನಂದಿಸಿದೆ. ಹೆಚ್ಚಿನ ಅನಾಹುತ ತಪ್ಪಿದ್ದು, ಸಿಲೆಂಡರ್ ಸ್ಪೋಟ ದಿಂದ ಲಕ್ಷಾಂತರ ರೂ.ಹಾನಿ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ‌ಧಾವಿಸಿದ್ದಾರೆ.

Latest Indian news

Popular Stories