ಉ.ಕ | ಭಾರೀ ಮಳೆ : ಗೋಯರ್ ,ಬಾರಗದ್ದೆ ಕಾಡಿನ‌ ಗ್ರಾಮಗಳ ಸಂಪರ್ಕ ಕಡಿತ

ಕಾರವಾರ: ಭಾರೀ ಮಳೆಗೆ ಕಾರವಾರ ತಾಲೂಕಿನ ಕಾಡಿನ ಗ್ರಾಮಗಳಾದ ಗೋಯರ್,ಬಾರಗದ್ದೆ ಸಂಪರ್ಕ ರಸ್ತೆ ಮುಳುಗಡೆಯಾಗಿದೆ.

ಮಳೆ ಹಾಗೂ ಸೇತುವೆ ಜಲಾವೃತ ಕಾರಣ ರಸ್ತೆಯ ಸಂಚರಿಸಲು ಗ್ರಾಮಸ್ಥರು ಪರದಾಡುವಂತಾಗಿದೆ.ಕಾರವಾರದ ಗೋಯರ್ ಗ್ರಾಮದ ಸಂಪರ್ಕ ನಗರದೊಂದಿಗೆ ಕಡಿತವಾಗಿದೆ.
ಕಾಡಿನ ಹಾದಿಯಲ್ಲೇ ಸಾಗಬೇಕಿರುವ ಗ್ರಾಮದ ರಸ್ತೆ ಜಲಾವೃತವಾಗಿದೆ.

ಸುಮಾರು 25ಕ್ಕೂ ಅಧಿಕ ಮನೆಗಳಿರುವ ಗೋಯರ್ ಗ್ರಾಮ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ‌ ಹಳ್ಳದ ನೀರು ತುಂಬಿದೆ.

ನೀರು ತುಂಬಿ ನಿಂತ ರಸ್ತೆಯಲ್ಲೇ ಹರಸಾಹಸಪಟ್ಟು ಗ್ರಾಮಸ್ಥರ ಸಂಚಾರ ಮಾಡಬೇಕಿದೆ.ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೇ ಗ್ರಾಮದ ಜನರ ಪರದಾಟ ಮುಂದುವರಿದಿದೆ.

Latest Indian news

Popular Stories