ಉ.ಕ | ಮನೆ ಕಳ್ಳತನ ಪ್ರಕರಣ : ಮೂವರು ಆರೋಪಿಗಳ ಬಂಧನ

ಕಾರವಾರ : ದಾಂಡೇಲಿ ನಗರದ ವನಶ್ರೀ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನದ ಆರೋಪಿಗಳಾದ‌
ಅಶೋಕ ಗುರವ,ಫೈರೋಜ್ ದೌಲತ್ತಿ ಹಾಗೂ ಮೈಕಲ್ ಕಕ್ಕೇರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ದಾಂಡೇಲಿಯ ನಿವಾಸಿ ಶಂಶುನ್ನಿಸಾ ಶೇಖ್ ಎಂಬುವವರ ಮನೆ ಕಳ್ಳತನ ಮಾಡಿದ್ದ ಆರೋಪಗಳನ್ನು,‌
ಸುಳುವಿನ ಆಧಾರದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ
ಬಂಗಾರದ ಆಭರಣ, ಕೆಲ ಬೆಳ್ಳಿ ವಸ್ತು, ‌ನಗದು ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ದಾಂಡೇಲಿ ನಗರದ ಮಾರುತಿ ನಗರ ,ಗಾಂಧಿ ನಗರ ನಿವಾಸಿಗಳಾಗಿದ್ದಾರೆ‌.
ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories