ಉ.ಕ | ಬಾಡಿಗೆ ಕಟ್ಟಡದಲ್ಲಿ ನಡೆವ ಕೆಲ ಅಂಗನವಾಡಿಗಳಲ್ಲಿ ಸೌಕರ್ಯಗಳ ಕೊರತೆ ಇದೆ: ನ್ಯಾಯಾಧೀಶೆ ದಿವ್ಯ ಶ್ರೀ ಸಿ.ಎಂ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 325 ಬಾಡಿಗೆ ಅಂಗನವಾಡಿ ಕಟ್ಟಡಗಳ ಪೈಕಿ ಕೆಲ ಕಟ್ಟಡಗಳಲ್ಲಿ ಮೂಲಭೂತ ಸೌಕರ್ಯಗಳು ಸರಿಯಿಲ್ಲ. ಅಡುಗೆ ಸಾಮಾಗ್ರಿ ಸಂಗ್ರಹ ಹಾಗೂ ಅಡಿಗೆ ,ಮಕ್ಕಳ ಕಲಿಕೆ ಒಂದೇ ಕಡೆ ಆಗುತ್ತಿದ್ದು, ಇಂತಹ ಅಂಗನವಾಡಿಗಳ ಸ್ಥಿತಿ ಗತಿ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ , ನ್ಯಾಯಾಧೀಶೆ
ದಿವ್ಯ ಶ್ರೀ ಸಿ.ಎಂ. ಹೇಳಿದರು.
ಕಾರವಾರದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಅವರು ಬುಧುವಾರ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಬಾಡಿಗೆ ಅಂಗನವಾಡಿ ಕಟ್ಟಡಗಳಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲ. ಶೌಚಾಲಯದಲ್ಲೇ ಅಡುಗೆ ಪಾತ್ರ ತೊಳೆಯಲಾಗುತ್ತದೆ. ಕಲಿಕೆ ಸಹ ಅಲ್ಲೇ ನಡೆಯುತ್ತಿದೆ.ಸರ್ಕಾರಿ ಅಂಗನವಾಡಿ 2112 ಕಟ್ಟಡಗಳಲ್ಲಿ ವ್ಯವಸ್ಥೆ ಚೆನ್ನಾಗಿದೆ. 114 ಕಡೆ ಸಮುದಾಯ ಭವನಗಳಲ್ಲಿ ಅಂಗನವಾಡಿ ನಡೆಯುತ್ತಿವೆ. ಆಹಾರದ ಗುಣಮಟ್ಟ, ಪೌಷ್ಟಿಕ ಆಹಾರ‌ ನೀಡಿಕೆ ಚೆನ್ನಾಗಿದೆ ಎಂದರು. ಕೊಣೆವಾಡದಲ್ಲಿ ಕೊಳಚೆ ನಾಲಾ ಪಕ್ಕ ಅಂಗನವಾಡಿ ಇದ್ದು,‌ಇದರ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಾವು ನೀಡಿದ ವರದಿಯಲ್ಲಿ ಗಮನ ಸೆಳೆಯಲಾಗಿದೆ. ಶೌಚಾಲಯ ವ್ಯವಸ್ಥೆ ಸುಧಾರಿಸಬೇಕಿದೆ. ಮಕ್ಕಳ ಸುರಕ್ಷತೆಗೆ ಇನ್ನೂ ಕ್ರಮಗಳಾಗಬೇಕಿವೆ ಎಂದರು‌ .ವಿವಿಧ ತಾಲೂಕುಗಳಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ವರದಿ ಪಡೆಯಲಾಗಿದೆ ಎಂದರು.

ಜು.13 ರಂದು ಲೋಕ ಅದಾಲತ್ ನಡೆಯಲಿದ್ದು ರಾಜೀಯಾಗಬಲ್ಲ ಪ್ರಕರಣಗಳು ಬರುತ್ತಿವೆ. ಸೀಬರ್ಡ ಭೂ ಪರಿಹಾರಕ್ಕೆ ಸಂಬಂಧಿಸಿದ 29 ಪ್ರಕರಣ ಗಳಲ್ಲಿ ಪರಿಹಾರ ಬಂದಿದೆ. ಬಾಕಿ ಪ್ರಕರಣಗಳಲ್ಲಿ ದೆಹಲಿ ಯಿಂದ ಅನುದಾನ ಬಿಡುಗಡೆಗೆ ಅನೇಕ ಹಂತದ ಪ್ರೊಸಿಜರ್ಸ ಇದ್ದು, ಭೂ ಸ್ವಾಧೀನ ಕಚೇರಿಯಿಂದ ಪ್ರಸ್ತಾವನೆ ಹೋಗಿದೆ ಎಂದರು‌ .

ವಾಜ್ಯಪೂರ್ವ ಪ್ರಕರಣಗಳನ್ನು ಸಹ ರಾಜೀಗಾಗಿ ಲೋಕ ಅದಾಲತ್ ಗೆ ತರಬಹುದು ಎಂದರು.

Latest Indian news

Popular Stories