ಕಾರವಾರ : ಬೆಂಗಳೂರು ಮೂಲದ ಮೂರು ಜನ ಸ್ನೇಹಿತರಾದ ಸ್ಮಿತಾ ರವಿಚಂದ್ರನ್ (23), ನಿಹಾರಿಕಾ ಗಿರಿ (22) ,ಪವಿತ್ರ ಸುಂದರ್ (22) ಎಂಬುವವರು ಕಡಲೆಗೆ ಸಿಕ್ಕಿ ಪ್ರಾಣ ಅಪಾಯದಲ್ಲಿದ್ದವರನ್ನು ಲೈಫ್ ಗಾರ್ಡಗಳು ರಕ್ಷಿಸಿದ್ದಾರೆ.
ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಮೂವರು ಗೆಳತಿಯರು ಕುಡ್ಲೇ ಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರ ಅಲೆಗೆ ಸಿಕ್ಕು ಆಳ ಸಮುದ್ರದ ಕಡೆ ತೇಲಿ ಹೋಗಿದ್ದರು.
ಸುಮಾರು 2.30 ರ ಸುಮಾರಿಗೆ ಈ ಘಟನೆ ನಡೆದಿದೆ . ಈಜುವ ಸಂದರ್ಭದಲ್ಲಿ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ನವೀನ್ ಅಂಬಿಗ, ಮಂಜುನಾಥ್ ಹರಿಕಂತ್ರ ತಕ್ಷಣ ರಕ್ಷಣೆಗೆ ಧಾವಿಸಿ ರಕ್ಷಣೆ ಮಾಡಿದ್ದಾರೆ. ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ ಅವರ ಜೆಟ್ ಸ್ಕೀ ಮೂಲಕ ಸಹಾಯ ಮಾಡಿ ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
…