ಉ.ಕ: ಯುವತಿಗೆ ವಂಚಿಸಿದ ಪೊಲೀಸ್ ಕಾನ್ಸಟೇಬಲ್ !

ಕಾರವಾರ :ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿದ ಪೊಲೀಸ್ ಕಾಸ್ಸ್ಟೇಬಲ್ ಓರ್ವ , ಆ ಯುವತಿಯಿಂದ ರೂ. 18 ಲಕ್ಷ ಪಡೆದು , ಮದುವೆಯೂ ಆಗದೆ, ಪಡೆದ ಹಣವನ್ನು ಸಹ ವಾಪಸ್ ನೀಡದೆ ಪಂಗನಾಮ ಹಾಕಿರುವ ಘಟನೆ ಮುಂಡಗೋಡಿನಲ್ಲಿ ನಡೆದಿದೆ. ಈ ಸಂಬಂಧ ಮುಂಡಗೋಡ ಪೊಲೀಸರು ಪಿಸಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಮುಂಡಗೋಡು ಠಾಣೆಯ ಪೊಲೀಸ್ ಕಾನ್ಸಟೇಬಲ್ ಗಿರೀಶ್ .ಎಸ್.ಎಮ್ .ಎಂಬಾತ ಯುವತಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ಮೂಲದ ಸುಚಿತ್ರಾ ವಂಚನೆಗೊಳಗಾದ ಯುವತಿ. ಇದೀಗ ಸುಚಿತ್ರ ಅವರು ಗೀರಿಶ್ ವಿರುದ್ಧ ದೂರು ನೀಡಿದ್ದಾರೆ.

ಈ ಹಿಂದೆ ಸುಚಿತ್ರಾ ಅವರನ್ನು ಗಿರೀಶ್ ಮದುವೆಯಾಗುವುದಾಗಿ ನಂಬಿಸಿದ್ದ . ಈಗ ಮಾತು ಬದಲಿಸಿ ವಂಚಿಸಿರುವ ಬಗ್ಗೆ ಯುವತಿ ಎಸ್.ಪಿ ವಿಷ್ಣುವರ್ಧನಗೆ ದೂರು ನೀಡಿದ್ದರು. ದೂರು ಹಿನ್ನಲೆಯಲ್ಲಿ ಆತನನ್ನು ಕರೆಯಿಸಿ ತನಿಖೆ ಕೈಗೊಂಡಾಗ ಹಣ ಪಡೆದಿದ್ದೆ‌. ಹಣ ಮರಳಿಸುತ್ತೇನೆ ಎಂದು ಒಪ್ಪಿಕೊಂಡಿದ್ದ. ಆದರೆ ಮದುವೆಯಾಗಲು ನಿರಾಕರಿಸಿದ್ದ.

ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅವರ ಎದುರು ಒಪ್ಪಿಕೊಂಡಂತೆ, ಗಿರೀಶ್ ಆ ಯುವತಿ ಸುಚಿತ್ರಾಗೆ ಹಣ ವಾಪಸ್ ಮಾಡಿರಲಿಲ್ಲ . 18 ಲಕ್ಷ ರೂ. ಹಣ ಮರಳಿಸದೇ ಇರುವುದರಿಂದ ಯುವತಿ ಕಾಸ್ಸ್ಟೇಬಲ್ ವಿರುದ್ದ ಮುಂಡಗೋಡು ಠಾಣೆಯಲ್ಲಿ ವಂಚನೆ ಮಾಡಿದ ದೂರು ನೀಡಿದ್ದು , ಮುಂಡಗೋಡು ಪೊಲೀಸರು ಕಲಂ 420 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Latest Indian news

Popular Stories