ವಾಲೈಂಟೆನ್ ಡೇ ಹದಿಹರೆಯದವರಿಗೆ ಮಾತ್ರವಲ್ಲ..ಜೀವನ ಪ್ರೀತಿಸುವ ಎಲ್ಲರಿಗೂ…

ವಿಶೇಷ ಲೇಖನ: ಗಂಗೂಬಾಯಿ ಮಾನಕರ
(ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ)

ಕಾರವಾರ : ಫೆಬ್ರವರಿ 14 ಎಲ್ಲೆಡೆ ಪ್ರೇಮಿಗಳ ದಿನದ ಆಚರಣೆ. ಆದರೆ ಪ್ರೇಮಿಗಳು ಎಂದರೆ ಬರೀ ಹದಿಹರೆಯದವರು ಮಾತ್ರವಲ್ಲ.. ಜೀವನದಲ್ಲಿ ನಿರೀಕ್ಷಿತ ಗುರಿ ಇಟ್ಟುಕೊಂಡು ಆ ಗುರಿಯನ್ನು ಸಾಧಿಸಿ , ಆ ಸಾಧನೆಯ ದಾರಿಯಲ್ಲಿ ಇನ್ನಷ್ಟು ಉತ್ಸಾಹದಿಂದ ಮುನ್ನುಗ್ಗುತ್ತಿರುವವವರು, ಜೀವನದ ಸಂಧ್ಯಾ ಕಾಲದಲ್ಲಿದ್ದು ತಮ್ಮ ಗತಕಾಲವನ್ನು ನೆನೆದು, ಆಗ ತಾವು ಮಾಡಿದ ತಮ್ಮ ನಿಷ್ಕಲ್ಮಷ ಕಾರ್ಯಗಳ ಮೂಲಕ ಆತ್ಮತೃಪ್ತಿಯಿಂದ ಜೀವಿಸುತ್ತಿರುವವರು.. ದೈಹಿಕ ವೈಫಲ್ಯ ಮತ್ತು ಇತರೇ ಎಲ್ಲಾ ರೀತಿಯ ಸಾಮಾಜಿಕ,ಅರ್ಥಿಕ ಕಷ್ಟಗಳನ್ನು ಮೆಟ್ಟಿನಿಂತು ನೆಮ್ಮದಿಯ ಜೀವನ ನಡೆಸುತ್ತಿರುವ ಎಲ್ಲರಿಗೂ ಪ್ರತಿದಿನವೂ ವಾಲೈಂಟೇನ್ ಡೇ..
ಹದಿಹರೆಯುವ ಯುವಜನತೆ ತಮ್ಮ ಹುಚ್ಚುಕೋಡಿ ಮನಸ್ಸಿನಿಂದ ಕೇವಲ ಬಾಹ್ಯ ಸೌಂದರ್ಯಗೆ ಮರುಳಾಗದೇ, ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು , ತಮ್ಮ ವಿಧ್ಯಾಭ್ಯಾಸದಲ್ಲಿ , ಶೈಕ್ಷಣಿಕ ಚಟುವಟಿಕೆಗಳಲ್ಲಿ ತನ್ಮಯರಾಗಿ, ಬದುಕಿನಲ್ಲಿ ಉನ್ನತ ಗುರಿಗಳನ್ನು ಇಟ್ಟುಕೊಂಡು ಆ ಗುರಿ ಸಾಧನೆಯ ಕಡೆಗೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು. ಸರ್ಕಾರವು ಯುವ ಜನತೆಯ ಸಮಗ್ರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ತಿಳಿದುಕೊಂಡು, ಆ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆಯಬೇಕು.

ಸರ್ಕಾರವು ಯುವ ಜನತೆಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗುಂತೆ ನೀಡಲಾಗುವ ವಿದ್ಯಾರ್ಥಿ ವೇತನ, ಪೇಲೋಶಿಫ್ ಗಳು, ಪಿ.ಹೆಚ್.ಡಿ ವ್ಯಾಸಾಂಗಕ್ಕೆ ನಿಡುವ ವಿದ್ಯಾರ್ಥಿ ವೇತನಗಳು, ಕಾನೂನು ಪಧವೀಧರರಿಗೆ ನೀಡುವ ಸಹಾಯಧನ, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ನೀಡುವ ವಿದ್ಯಾರ್ಥಿ ವೇತನಗಳು ಮಾತ್ರವಲ್ಲದೇ ಉದ್ಯೋಗ ದೊರಕಿಸುವ ಉದ್ದೇಶದಿಂದ ಭಾರತೀಯ ನಾಗರೀಕ ಸೇವೆಗಳು , ಕರ್ನಾಟಕ ನಾಗರೀಕ ಸೇವೆಗಳು , ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುವ ಉಚಿತ ತರಬೇತಿಗಳು, ಸಶಸ್ತç ಪಡೆಗಳಲ್ಲಿ , ಯೂನಿಫಾರ್ಮ್ ಸೇವೆಗಳಲ್ಲಿ ಉದ್ಯೋಗವಕಾಶ ಪಡೆಯಲು ನೀಡುವ ತರಬೇತಿ, ವಿವಿಧ ಕೌಶಲ್ಯಾಭಿವೃದ್ದಿ ತರಬೇತಿ ಯೋಜನೆಗಳ ಸದುಪಯೋಗವನ್ನು ಪಡೆಯಬೇಕು.

ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರೂ ಸಹ ತಮ್ಮ ಕಚೇರಿಗೆ ಆಗಮಿಸುವ ನಾಗರೀಕರನ್ನು ಸೌಹಾರ್ದಯುತವಾಗಿ ಮಾತನಾಡಿಸಿ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಅವುಗಳಿಗೆ ತಮ್ಮ ಹಂತದಲ್ಲಿ ಸೂಕ್ತ ಪರಿಹಾರ ಒದಗಿಸಿದಲ್ಲಿ , ಸಾರ್ವಜನಿಕರು ತಮಗೆ ನೀಡುವ ಪ್ರೀತಿ, ಗೌರವ ಅಭಿಮಾನಗಳು, ಪ್ರತಿ ನಿತ್ಯದ ತಮ್ಮ ಕೆಲಸ ಕಾರ್ಯಗಳನ್ನು ಹೆಚ್ಚಿನ ಸಂತೋಷದಿಂದ ಮಾಡುವ ಹುಮ್ಮಸ್ಸು ನೀಡುತ್ತವೆ ಅಲ್ಲದೇ ನಿತ್ಯದ ಕೆಲಸ ಕಾರ್ಯಗಳನ್ನು ಅಂದೇ ಮುಕ್ತಾಯಗೊಳಿಸಿದ್ದಲ್ಲಿ ಸಂಜೆ ಮನೆಗೆ ತೆರಳಿದಾಗ ಕುಟುಂಬದೊಂದಿಗೆ ಸಂತೋಷದಿಂದ ಬೆರೆತು ನಿರಾಳವಾಗಿ ಕಾಲ ಕಳೆಯಬಹುದಾಗಿದೆ.

ವೆಲೈಂಟೆನ್ ಡೇ ಯಂದು ಮೊದಲಿಗೆ ನಮ್ಮನ್ನು ನಾವು ಪ್ರೀತಿಸೋಣ, ನಮ್ಮ ಗುರಿಗಳನ್ನು , ಸಾಧನೆಗಳನ್ನು ಪ್ರೀತಿಸೋಣ, ನಮ್ಮ ಬದುಕಿನಲ್ಲಿ ಯಶಸ್ಸು ಪಡೆಯಲು ಸಹಕರಿಸಿದವನ್ನು, ಕಷ್ಟದಲ್ಲಿದ್ದಾಗ ಬೆಂಬಲ ನೀಡಿದ ಸ್ನೇಹಿತರನ್ನು, ಸದಾ ನಮ್ಮ ಯಶಸ್ಸಿಗೆ ಹಾರೈಸುವ ಪೋಷಕರನ್ನು, ನಮ್ಮ ವೈಫಲ್ಯಗಳಿಗೆ ಸಾಂತ್ವನ ನೀಡುವ, ಸಾಧನೆಗೆ ಬೆನ್ನುಲುಬಾಗಿ ನಿಲ್ಲುವ ಜೀವನ ಸಂಗಾತಿಗಳನ್ನು , ನಮಗಾಗಿ ಈ ಸುಂದರ ಪ್ರಕೃತಿಯನ್ನು ನಿರ್ಮಿಸಿದ ಭಗವಂತನನ್ನು ಪ್ರತಿದಿನವು ತಪ್ಪದೇ ನೆನಯೋಣ, ಪ್ರೀತಿಸೋಣ. ವಾಲೈಂಟೈನ್ ಡೇ ಯ ಸಂಭ್ರಮ ಒಂದು ದಿನಕ್ಕೆ, ಒಂದು ವಯೋಮಾನಕ್ಕೆ ಸೀಮಿತವಾಗದೇ ಪ್ರತೀ ದಿನವೂ, ಪ್ರತಿಯೊಬ್ಬರಿಗೂ, ಪ್ರತೀ ಕೆಲಸದಲ್ಲೂ ಕಂಡುಬರಲಿ..

ಗುಡಿಸಲಾಗಲಿ ಅರಮನೆಯಾರಲಿ..
ಬಡವನಾಗಲಿ ಶ್ರೀಮಂತನಾಗಲಿ..
ಯಾವುದೇ ದೇಶವಾಗಲಿ, ಭಾಷೆಯಾಗಲಿ..
ಜಾತಿಯಾಗಲಿ ಧರ್ಮವಾಗಲಿ..
ಸಕಲ ಜೀವಾತ್ಮಗಳಲ್ಲಿ ಪ್ರೇಮ ನಿತ್ಯ ನೂತನವಾಗಿರಲಿ..ನಿರಂತರವಾಗಿರಲಿ.. ಶಾಶ್ವತವಾಗಿರಲಿ..
……….

Latest Indian news

Popular Stories