ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ : ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಹೇಳಿದರು‌ .ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಟಿ ಯಲ್ಲಿ ಚುನಾವಣಾ ದಿನಾಂಕದ ವಿವರ ನೀಡಿದರು. ಲೋಕಸಭಾ ಚುನಾವಣಾ ನಿಮಿತ್ತ 12 ಎಪ್ರಿಲ್ ರಂದು ನೋಟಿಫಿಕೇಶನ್ ಹೊರಡಲಿದೆ.

ಲೋಕಸಭೆಗೆ ಸ್ಪರ್ಧಿಗಳು
ನಾಮಪತ್ರ ಸಲ್ಲಿಸಲು
ಎ. 19 ಕೊನೆಯ ದಿನ.
ಎ. 20 ನಾಮಪತ್ರ ಪರಿಶೀಲನೆ ನಡೆಯಲಿದೆ.
ಎ. 22 ನಾಮ ಪತ್ರ ಹಿಂಪಡೆಯಲು ಕೊನೆಯ ದಿನ ವಾಗಿದೆ‌ .
ಮೇ7 ರಂದು ಮತದಾನ ನಡೆಯಲಿದೆ.
4 ಜೂನ್ ಮತ ಎಣಿಕೆ ಮಾಡಲಾಗುವುದು‌ ‌ಎಂದ ಜಿಲ್ಲಾ ಚುನಾವಣಾಧಿಕಾರಿ ಅವರು ಜೂನ್ 6 ಕ್ಕೆ ನೀತಿ ಸಂಹಿತೆ ಮುಕ್ತಾಯ ವಾಗಲಿದೆ ಎಂದರು.
ಕಿತ್ತೂರು , ಖಾನಾಪುರ , ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಸಿರಸಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಯಲ್ಲಿವೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1622857 ಮತದಾರರು ಇದ್ದಾರೆ‌ . 815599 ಪುರುಷರು, 8072 42 ಮಹಿಳೆಯರು, 16 ಅನ್ಯ ಲಿಂಗಿ ಮತದಾರರು ಇದ್ದಾರೆ. 2489 ಪೊಲೀಯ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಕೆಲಸ ಮಾಡಲಿದ್ದಾರೆ. 493 ಪೊಲೀಂಗ್ ಸ್ಟೆಶನ್ (ಮತಗಟ್ಟೆ) ಲೋಕಸಭಾ ಕ್ಷೇತ್ರದಲ್ಲಿ ಇವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ವಿವರಿಸಿದರು.

ಚುನಾವಣಾ ದೂರು ಸಂಬಂಧ ಕಣ್ಣಿಡಲು
324 ಸಿಬ್ಬಂದಿ ಎಂಸಿಸಿ ಟೀಮ್ ನಲ್ಲಿದ್ದಾರೆ.
ಜಿಲ್ಲೆಯ 28 ಕಡೆ ಚೆಕ್ ಪೋಸ್ಟ್ ಮಾಡಲಾಗಿದೆ ಎಂದು ಎಸ್ಪಿ ವಿಷ್ಣುವರ್ಧನ ತಿಳಿಸಿದರು‌ .

ಎಂಸಿಸಿ ವಿಭಾಗದ ಅಧಿಕಾರಿ, ಜಿ.ಪಂ .ಸಿಇಒ ಈಶ್ವರ ಕಾಂದೂ, ಎಡಿಸಿ ಪ್ರಕಾಶ್ ರಜಪೂತ್ ಪತ್ರಿಕಾಗೋಷ್ಠಿಯಲ್ಲಿದ್ದರು.

Latest Indian news

Popular Stories