ಖ್ಯಾತ ನಟ ಮತ್ತು ಬಿಜೆಪಿಯ ಮಾಜಿ ಸಂಸದ ಶತ್ರುಘನ್ ಸಿನ್ಹಾ ಇಂದು ಟ್ವಿಟ್ಟರ್ ನಲ್ಲಿ ಒಂದು ಹಳೆಯ ವಿಡಿಯೋ ಹಂಚಿಕೊಂಡರು. ಆ ವಿಡಿಯೋನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿಯ ಹಿರಿಯ ಮುತ್ಸದ್ದಿ ಲಾಲಕೃಷ್ಣ ಅಡ್ವಾಣಿಯವರ ಬಗ್ಗೆ ಹೇಳಿರುವ ಮಾತುಗಳಿವೆ.
ಈ ವಿಡಿಯೋ ನೋಡಲೂ ಕ್ಲಿಕ್ ಮಾಡಿ
“ಅಡ್ವಾಣಿಯವರೇ ಈ ದೇಶದ ಮುಂದಿನ ಪ್ರಧಾನಿ, ಯಾವ ನರೇಂದ್ರನನ್ನು ನೀವು ಗುಜರಾತ್ ರಾಜ್ಯದ ಅಭಿವೃದ್ಧಿಯ ಹರಿಕಾರ ಎಂದು ನೀವು ಅರಿತಿದ್ದೀರೋ ಆ ನರೇಂದ್ರನನ್ನು ಬೆಳೆಸಿದ್ದು ಅಡ್ವಾಣಿಯವರು, ಈ ನರೇಂದ್ರನನ್ನು ಇಷ್ಟು ಉತ್ತಮವಾಗಿ ಬೆಳೆಸಿರುವಾಗ ಅವರು ದೇಶವನ್ನು ಕೂಡಾ ಉತ್ತಮವಾಗಿ ಚಲಾಯಿಸಬಲ್ಲರು” ಎಂದು ನರೇಂದ್ರ ಮೋದಿಯವರು ಅಡ್ವಾಣಿಯವರ ಬಗ್ಗೆ ಹೇಳಿರುವ ಹಳೆಯ ವಿಡಿಯೋ ತುಣುಕನ್ನು ಟ್ವಿಟ್ಟರ್ ನಲ್ಲಿ ಹಂಚಿ ಶತ್ರುಘನ್ ಸಿನ್ಹಾ ವ್ಯಂಗ್ಯ ಮಾಡಿದರು.