ಅಕ್ರಮವಾಗಿ ಬೆಳದಿದ್ದ ಹಸಿ ಗಾಂಜಾ ಜಪ್ತಿ: ಓರ್ವನ ಬಂಧನ

ವಿಜಯಪುರ: ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದು, ಲಕ್ಷಾಂತರ ಮೌಲ್ಯದ ಹಸಿ ಗಾಂಜಾ ಜಪ್ತಿಗೈದು ಓರ್ವನನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮಲಗಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಮಲಗಲದಿನ್ನಿ ನಿವಾಸಿ ಬಸವರಾಜ್ ಮಲ್ಲೇಶಪ್ಪ ಬಿರಾದಾರ್ ಬಂಧಿತ ಆರೋಪಿ. ಆರೋಪಿ ತನ್ನ ಹೊಲದಲ್ಲಿ 1.80 ಲಕ್ಷ ಮೌಲ್ಯದ 36.820 ಕೆಜಿಯಷ್ಟು ಹಸಿ ಗಾಂಜಾ ಗಿಡಗಳನ್ನು ಬೆಳೆದಿದ್ದನು. ಮಾಹಿತಿ ಆಧರಿಸಿ ಮುದ್ದೇಬಿಹಾಳ ಪೊಲೀಸರು ದಾಳಿಗೈದು ಹಸಿ ಗಾಂಜಾ ಜಪ್ತಿಗೈದು ಆರೋಪಿ ವಿರುದ್ಧ ಕಲಂ 20(a) (b)NDPS ಆಕ್ಟ್ ರಿತ್ಯ ಪ್ರಕರಣ ದಾಖಲಿಸಿದ್ದಾರೆ.

ದಾಳಿಯಲ್ಲಿ ಸಿಪಿಐ ಮಲ್ಲಿಕಾರ್ಜುನ್ ತುಳಸಿಗಿರಿ, ಪಿಎಸ್ಐ ಆರೀಫ್ ಮುಶಾಪುರಿ, ಸಿಬ್ಬಂದಿಗಳಾದ ಗೋವಿಂದ್ ಗೆಣ್ಣೂರ್, ವಿರೇಶ್ ಹಾಲಗಂಗಾಧರಮಠ್, ಮಲ್ಲನಗೌಡ ಬೋಳರೆಡ್ಡಿ, ಚಿದಾನಂದ್ ಸುರುಗಿಹಳ್ಳಿ, ಶ್ರೀಕಾಂತ್ ಬಿರಾದಾರ್, ನರಸಿಂಹ ಚೌದರಿ, ಶಿವರಾಜ್ ನಾಗರೆಡ್ಡಿ, ಮಂಜುನಾಥ್ ಬುಳ್ಳ, ಮಾಳಪ್ಪ ನಾಲತ್ವಡ್, ರವಿ ಲಮಾಣಿ ದಾಳಿಯಲ್ಲಿ ಭಾಗವಹಿಸಿದರು.

ಈ ಕುರಿತು ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories