ಅತ್ಯಾಚಾರ ಪ್ರಕರಣ: ಇಬ್ಬರ ಬಂಧನ

ವಿಜಯಪುರ: ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ಶನಿವಾರ ನಡೆದಿದೆ.

ವಿಜಯಪುರ ನಗರದ ಜಂಡಾಕಟ್ಟಿ ನಿವಾಸಿ ಸದ್ದಾಂ ಶೇಖ್ ಹಾಗೂ ಬಸವ ನಗರ ನಿವಾಸಿ ರವಿ ಬಂಧಿತ ಆರೋಪಿಗಳು. ಕಳೆದ ಫೆಬ್ರವರಿ 23ರ ರಾತ್ರಿ ಮನೆಗೆ ಹೊಗಬೇಕು ಎಂದು ವಿಜಯಪುರ ನಗರದ ವಾಟರ್ ಟ್ಯಾಂಕ್ ಬಳಿ ನಿಂತಿದ್ದ ವೃದ್ಧೆಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ವೆಸಗಿ ಪರಾರಿಯಾಗಿದ್ದರು. ತನಿಖೆ ನಡೆಸಿ, ಅತ್ಯಾಚಾರ ಎಸಗಿದ್ದ ಇಬ್ಬರ ಬಂಧನ ಮಾಡಿದ್ದಾರೆ.

ವಿಜಯಪುರ ಮಹಿಳಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories