ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿರುವ ಮಧ್ಯದಂಗಡಿಗಳ ಸನ್ನದು ನವಿಕರಣ ಮಾಡುವ ಸಂಧರ್ಭದಲ್ಲಿ ಅಬಕಾರಿ ಅಧಿಕಾರಿಗಳು ಅಬಕಾರಿ ನಿಯಮವನ್ನು ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೋಳ್ಳಬೇಕು ಎಂದು ಮುದ್ದೇಬಿಹಾಳ ಪಟ್ಟಣದ ಆಡಳಿತ ಸೌಧದ ಆವರಣದಲ್ಲಿ ಪತ್ರಕರ್ತ ಸಾಮಾಜಿಕ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹತ್ತನೇಯ ದಿನ ಪೂರೈಸಿ ಹನ್ನೊಂದನೇಯ ದಿನಕ್ಕೆ ಉಪವಾಸ ಸತ್ಯಾಗ್ರಹ ಪ್ರಾರಂಬಿಸಲಾಯಿತು.
ಈ ವೇಳೆಯಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಬಿಸಿದ ಹೋರಾಟಗಾರ ಕುಂದರಗಿ ಮಾತನಾಡಿ ತಾಲೂಕಿನಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆದಿರುವಂತಹ ಅಕ್ರಮದ ಕುರಿತು ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸೌಜನ್ಯಕ್ಕಾದರೂ ತಾಲೂಕಾಡಳಿತ ಬಂದು ನಮ್ಮ ಸಮಸ್ಯೇಗಳನ್ನು ಕೇಳಿಲ್ಲಾ, ನಮ್ಮ ದೂರಿನ್ವಯ ಜಿಲ್ಲಾಧಿಕಾರಿಗಳು ಬಂದು ನಿಯಮ ಉಲ್ಲಂಘನೆಯಾದ ಮಧ್ಯದಂಗಡಿಗಳನ್ನು ಪರಿಶೀಲನೆ ಮಾಡಲು ಮನವಿಯನ್ನು ಮಾಡಿದ್ದೇನೆ, ತಾಲೂಕಾಡಳಿತ ಹೋರಾಟದ ಗಂಬೀರತೆಯನ್ನು ಅರಿತುಕೋಳ್ಳುವಲ್ಲಿ ಯಾಕೆ ವಿಪಲವಾಗಿದೆ, ಎಂಬುವದನ್ನು ನಮಗೆ ತಿಳಿಯುತ್ತಿಲ್ಲಾ ಇವರು ಸಹ ಮಧ್ಯದಂಗಡಿಗಳ ಮಾಲಿಕರ ಪ್ರಬಾವಕ್ಕೆ ಹೆದರಿದ್ದರಾ ? ಎಂದು ಪ್ರಶ್ನೇ ಮಾಡುತ್ತಾ ತಾಲೂಕಾಡಳಿತದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಅವರು ನನಗೆ ವ್ಯಯಕ್ತಿಕವಾಗಿ ಕೆಲವು ಖಾಸಗಿ ವ್ಯಕ್ತಿಗಳಿಂದ ಹೆದರಿಸುವ ಪ್ರಯತ್ನಗಳು ನಡೆಯುತ್ತಿವೆ, ಅದ್ಯಾವದಕ್ಕು ನಾನು ಹೆದರುವನಲ್ಲಾ, ಕೂಡಲೇ ಜಿಲ್ಲಾ ಅಧಿಕಾರಿಗಳು ಬಂದು ಮಧ್ಯದಂಗಡಿಗಳನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಯುವ ಘಟಕ ಜಿಲ್ಲಾಧ್ಯಕ್ಷ ಮಂಜುನಾಥ ನಾಯಕಮಕ್ಕಳ ಮಾತನಾಡಿ, ತಾಲೂಕಿನಲ್ಲಿ ಮಧ್ಯದಂಗಡಿಗಳನ್ನು ನವಿಕರಣ ಮಾಡುವ ಸಂಧರ್ಬದಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆಂಬುವದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಕೂಡಲೇ ಸಂಭಂದಿಸಿದ ಅಧಿಕಾರಿಗಳು ಬಂದು ಹೋರಾಟಗಾರರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ಸಂಧರ್ಭದಲ್ಲಿ ದಲಿತ ಮುಖಂಡ ಮಲ್ಲು ಬಿಜ್ಜೂರ, ಬಂದೇನವಾಜ ಕೊಂಡಗೂಳಿ, ತನ್ವೀರ್ ಮಕಾಂದಾರ, ಪ್ರಕಾಶ ಕಾಳೆ, ನೂರಹಮ್ಮದ್ ಸಣ್ಣಕ್ಕಿ, ಮಂಜುನಾಥ ನಾಯಕಮಕ್ಕಳ ಇನ್ನೀತರರು ಇದ್ದರು.