ಆಸ್ಪತ್ರೆ ಎದುರೇ ಗರ್ಭಿಣಿ ಹೆರಿಗೆ, ನರಳಾಟ

ವಿಜಯಪುರ: ವೈದ್ಯರ ನಿರ್ಲಕ್ಷ್ಯದಿಂದಾಗಿ ಸೂಕ್ತ ಸಮಯಕ್ಕೆ‌ ಆರೈಕೆ ದೊರಕದೇ ಆಸ್ಪತ್ರೆ ಎದುರಲ್ಲೇ ಮಹಿಳೆ ಶಿಶುವಿಗೆ ಜನ್ಮ ನೀಡಿದ ಘಟನೆ ನಾಗಠಾಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ವಿಜಯಪುರ ತಾಲ್ಲೂಕಿನ ಚವ್ಹಾಣ ದೊಡ್ಡಿಯ ಮಹಿಳೆ ಅನು ಬೇವು ಕೊಳೆಕರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ, ತಕ್ಷಣವೇ ಆಸ್ಪತ್ರೆಗೆ ಅವರನ್ನು ಕರೆ ತಂದಿದ್ದಾರೆ, ಆದರೆ ಆರೈಕೆ ದೊರಕದೇ ಆಸ್ಪತ್ರೆ ಎದುರಲ್ಲಿಯೇ ಹೆರಿಗೆಯಾಗಿದೆ,
ಹೆರಿಗೆಯಾದರೂ ಅರ್ಧ ಗಂಟೆ ನವಜಾತ ಶಿಶುವಿನ ಹುರಿ ಕಟ್ ಮಾಡದೇ ಇದ್ದಿದ್ದರಿಂದ ಬಾಣಂತಿ ನರಳಾಟ ಅನುಭವಿಸಿದರು.

Latest Indian news

Popular Stories