ಎಂ ಬಿ ಪಾಟೀಲ ಬ. ಬಾಗೇವಾಡಿಗೆ ಬಂದರೆ ಹಾರ್ಟ್ಲೀ ವೆಲಕಮ್ : ಶಾಸಕ ಶಿವಾನಂದ ಪಾಟೀಲ

ವಿಜಯಪುರ : `ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಎಂ.ಬಿ. ಪಾಟೀಲರು ಬಂದರೆ ಹೃದಯಸ್ಪರ್ಶಿಯಾಗಿ ಸ್ವಾಗತಿಸುತ್ತೇನೆ, ಅವರನ್ನು ಗೆಲ್ಲಿಸುವ ಜವಾಬ್ದಾರಿ ಸಹ ನಾನೇ ಹೊರುತ್ತೇನೆ ಎಂದು ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರ, ಬಸವನ ಬಾಗೇವಾಡಿ ಹಾಗೂ ಬಬಲೇಶ್ವರ ಮೂರು ಕ್ಷೇತ್ರಗಳಲ್ಲಿ ಅರ್ಜಿ ಹಾಕಿದ್ದೇನೆ, ಬಬಲೇಶ್ವರ ಕ್ಷೇತ್ರ ಒಂದು ಕಾಲಕ್ಕೆ ನನ್ನ ಕ್ಷೇತ್ರ, ರಾಜಕೀಯ ಕಾರಣಕ್ಕೆ ಅದನ್ನು ಬಿಡಬೇಕಾಯಿತು, ಬಲೇಶ್ವರ ಕ್ಷೇತ್ರದ ಜನರಿಗೆ ಹೇಳದೇ ಕ್ಷೇತ್ರ ಬಿಟ್ಟು ಹೋಗಿದ್ದು ತಪ್ಪು, ಈ ತಪ್ಪನ್ನು ನಾನು ಅವತ್ತೇ ಒಪ್ಪಿಕೊಂಡಿದ್ದೇನೆ, ಇವತ್ತು ಸಹ ಒಪ್ಪಿಕೊಳ್ಳುವೆ ಎಂದರು.
ಒಂದು ವೇಳೆ ಎಂ.ಬಿ. ಪಾಟೀಲರು ಬಸವನ ಬಾಗೇವಾಡಿಗೆ ಬಂದರೆ ಸಂಪೂರ್ಣ ಸ್ವಾಗತ, ಅವರನ್ನು ಗೆಲ್ಲಿಸುವ ಜವಾಬ್ದಾರಿ ಸಹ ನನ್ನದೇ ಎಂದರು.


ಈಗಾಗಲೇ ಎಂ.ಬಿ. ಪಾಟೀಲರು ಪ್ರಚಾರ ಶುರು ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಕಾಂಗ್ರೆಸ್, ನಾನು ಕಾಂಗ್ರೆಸ್ ಹೀಗಾಗಿ ಪ್ರಚಾರ ಶುರು ಮಾಡಲೇಬೇಕಲ್ಲ ಎಂದರು. ಮೂರು ಕ್ಷೇತ್ರಗಳಲ್ಲಿ ಅರ್ಜಿ ಹಾಕಿದ್ದೇನೆ, ಪಕ್ಷದ ವರಿಷ್ಠರು ಎಲ್ಲಿ ಹೇಳುತ್ತಾರೆ ಅಲ್ಲಿ ನಿಲ್ಲುತ್ತೇನೆ, ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ, ಪಕ್ಷ ಬಿಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ ಎಂದರು.


ಜೆಪಿ ನಡ್ಡಾ ಸ್ವಾಮೀಜಿಗಳಿಗೆ ರಾಜಕೀಯ ಪ್ರವೇಶಕ್ಕೆ ಆಫರ್ ಕೊಟ್ಟ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಧರ್ಮ ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಬೆರೆಯುತ್ತಿದೆ, ಧರ್ಮವನ್ನು ರಾಜಕೀಯದಲ್ಲಿ ಬೆರೆಸುವ ಸಂಸ್ಕೃತಿ ಕಾಂಗ್ರೆಸ್ಗೂ ಸರಿಯಲ್ಲ, ಬಿಜೆಪಿಗೂ ಸರಿಯಲ್ಲ, ದೇಶ ಉಳಿಯಬೇಕಾದರೆ ಧರ್ಮ ರಾಜಕಾರಣದಲ್ಲಿ ಬರಬಾರದು ಎಂದರು.

Latest Indian news

Popular Stories