ವಿಜಯಪುರ : ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಅಬ್ದುಲ್ ಹಮೀದ್ ಮುಶ್ರೀಫ್ ಕೋಟಿ ಕೋಟಿ ಆಸ್ತಿ ಹೊಂದಿದ್ದು, ಈ ಬಗ್ಗೆ ನಾಮಪತ್ರ ಸಲ್ಲಿಕೆ ಸಲ್ಲಿಸುವ ಸಂದರ್ಭದಲ್ಲಿ ಸಲ್ಲಿಸಿದ ಅಫಿಡಿವೇಟ್ನಲ್ಲಿ ಉಲ್ಲೇಖಿಸಿದ್ದಾರೆ.
ಹಮೀದ್ ಮುಶ್ರೀಫ್ ಅವರ ಬಳಿ ನಗದು ರೂಪದಲ್ಲಿ 4,32,154 ಹೊಂದಿದ್ದಾರೆ. ಹಮೀದ್ ಮುಶ್ರೀಫ್ ಅವರ ಹೆಸರಿನಲ್ಲಿ 1,70,77,805 ಮೌಲ್ಯದ ಚರಾಸ್ತಿ ಇದ್ದು ಆ ಪೈಕಿ ಟೋಯೋಟಾ ಇನ್ನೋವಾ, ಮಹೀಂದ್ರಾ ಬೋಲೆರೋ ಕಾರು ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿಯೂ 13,76,925 ರೂ. ಚರಾಸ್ತಿ ಇದೆ. ಹಮೀದ್ ಮೂಶ್ರೀಫ್ ಅವರ ಬಳಿ ಒಂದು ಗುಂಜಿ ಬಂಗಾರವಿಲ್ಲ.
ವಿವಿಧ ಭಾಗಗಳಲ್ಲಿ ಜಮೀನು, ವಾಣಿಜ್ಯ ಕಟ್ಟಡ, ನಿವೇಶನ ಹೊಂದಿರುವ ಬಗ್ಗೆಯೂ ಘೋಷಿಸಿರುವ ಅವರು 2,11,27,217 ರೂ. ಸ್ಥಿರಾಸ್ತಿ ಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವರ ಪತ್ನಿಯ ಬಳಿ 15.22 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದ್ದರೆ, ಅವರ ಹಿರಿಯ ಮಗ ಕನ್ನಾನ ಬಳಿ 53,12,500 ರೂ. ಮೌಲ್ಯದ ಚರಾಸ್ತಿ, 58,71,085 ರೂ. ಮೌಲ್ಯದ ಸ್ಥಿರಾಸ್ತಿ ಇದೆ, ಅವರ ದ್ವಿತೀಯ ಪುತ್ರ ಮೊಹ್ಮದ್ ಶೋಯೆಬ್ ಬಳಿ 3,40,533 ರೂ. ಮೌಲ್ಯದ ಚರಾಸ್ತಿ, 24,64,395 ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಮೂರನೇಯ ಪುತ್ರ ಫೈಜಾನ್ ಅವರ ಬಳಿ 2,53,437 ರೂ. ಮೌಲ್ಯದ ಚರಾಸ್ತಿ ಇದ್ದು ಸ್ಥಿರಾಸ್ತಿ ಇಲ್ಲ, ಅದೇ ತೆರನಾಗಿ ಅವರ ಪುತ್ರಿ ಬೇಬಿ ಆಯೇಷಾ ಅವರ ಬಳಿ 5,05,227 ರೂ. ಮೌಲ್ಯದ ಚರಾಸ್ತಿ ಇದ್ದು ಯಾವ ಸ್ಥಿರಾಸ್ತಿಯೂ ಇಲ್ಲ ಎಂದು ಘೋಷಣೆ ಮಾಡಿದ್ದಾರೆ.
ಪಿಕೆಪಿಎಸ್ ಬ್ಯಾಂಕ್ನಲ್ಲಿ 70 ಸಾವಿರ ರೂ., ಕೆನರಾ ಬ್ಯಾಂಕ್ನಲ್ಲಿ 19,10,257 ರೂ. ಸಾಲ ಇದೆ ಎಂದು ಘೋಷಣೆ ಮಾಡಿದ್ದಾರೆ.