ಚಿನ್ನದ ಅಂಗಡಿ ಮಾಲೀಕನ ಮೇಲೆ‌ ಗುಂಡಿನ‌ ದಾಳಿ

ವಿಜಯಪುರ: ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿಗೆ ಐವರು ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶಾಂತಿವೀರ ಮಠದ ಬಳಿ ಸೋಮವಾರ ನಡೆದಿದೆ.

ಕಾಳು ಪತ್ತಾರ ಎಂಬಾತನ ಮೇಲೆ ಫೈರಿಂಗ್‌‌ ಮಾಡಲು ಐವರು ಯತ್ನಿಸಿದ್ದಾರೆ. ಈ ವೇಳೆ ಗುಂಡು ಪಕ್ಕಕ್ಕೆ ತಗುಲಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಅಲ್ಲದೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Latest Indian news

Popular Stories