ವಿಜಯಪುರ: ಚುನಾವಣಾ ಕರ್ತವ್ಯದ ಮೇಲೆ ಹೊರಟಿದ್ದ ಬಸ್ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರು ಕ್ರಾಸ್ನಲ್ಲಿ ಮಂಗಳವಾರ ನಡೆದಿದೆ.
ಸಿಂದಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರ ತರಬೇತಿಗೆ ಸಿಬ್ಬಂದಿಗಳನ್ನ ಕರೆದೊಯ್ಯವ ಸಂದರ್ಭದಲ್ಲಿ ಘಟನೆ ನಡೆದಿದೆ. ಇನ್ನು ಬಸ್ ನ ಎಕ್ಸಲ್ ಕಟ್ ಆದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎನ್ನಲಾಗಿದೆ. ಬಸ್ ನಲ್ಲಿದ್ದ 15ಕ್ಕು ಅಧಿಕ ಜನರಿಗೆ ಗಾಯ ಆಗಿದೆ. ಬಸ್ನಲ್ಲಿ 40ಕ್ಕು ಅಧಿಕ ಪ್ರಯಾಣಿಕರಿದ್ದರು. ಗಾಯಾಳುಗಳನ್ನ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಷಯ ತಿಳಿದು ಗಾಯಾಳುಗಳ ನೆರವಿಗೆ ಮುದ್ದೇಬಿಹಾಳ ಚುನಾವಣಾಧಿಕಾರಿ ಚಂದ್ರಕಾಂತ ಪವಾರ್ ಧಾವಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.