ವಿಜಯಪುರ: ಭಾರತದಲ್ಲಿ 2014ರಲ್ಲಿ ಕೇವಲ 350ಕಿ.ಮೀ ಅಪ್ಟಿಕಲ್ ಕೇಬಲ ದೇಶದಲ್ಲಿ ಪಸರಿಸಿತ್ತು, ಇಂದು 2ಲಕ್ಷ ಕಿಲೋ ಮೀಟರ್ ವರೆಗೆ ಹೆಚ್ಚಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮೊದಲು ಸ್ಮಾರ್ಟ್ ಫೋನ್ ತಗೊಂಡ್ರೆ ಕವರ್ ಮೇಲೆ ಮೇಡ್ ಇನ್ ಚೈನಾ ಎಂದು ಇರ್ತಿತ್ತು. ಇದೀಗ ಮೇಡ್ ಇನ್ ಇಂಡಿಯಾ ಎಂದು ಕಾಣ್ತಿದೆ. ಇದು ಬದಲಾವಣೆ ಪರ್ವ ಅಲ್ಲವೇ ಎಂದರು. ಸ್ಟೀಲ್ ನಲ್ಲಿ 14ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದ್ದೇವೆ. ಅಟೊಮೋಬೈಲ್ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ.ಆರ್ಥಿಕ ಪ್ರಗತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.
ಪ್ರಧಾನಿ ಮೋದಿಯವರ ದೂರದೃಷ್ಟಿಯ ಪರಿಣಾಮ, ದೇಶದ 12 ಕೋಟಿ ಮಹಿಳೆಯರಿಗೆ ಮನೆ ಕೊಟ್ಟಿದ್ದಾರೆ, ಕರ್ನಾಕದಲ್ಲಿ 27 ಲಕ್ಷ ಶೌಚಾಲಯ ಕೊಡುವ ಮೂಲಕ ಮಹಿಳಾ ಸಶಕ್ತಿಕರಣ ಮಾಡಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಯಾವುದೇ ಬಡವರು ಹಾಗೆ ಇರಬಾರದು ಎಂದು ಮೂರು ಕೋಟಿ ಮನೆ ನಿರ್ಮಿಸಿ ಕೊಡಲಾಗಿದೆ. ಕರ್ನಾಟಕದಲ್ಲಿ ಎಂಟು ಲಕ್ಷ ಮನೆ ಕೊಡಲಾಗಿದೆ. ಆಯುಷ್ಯನ್ ಭಾರತ್ ಯೋಜನೆಯಲ್ಲಿ ಇಂದು ಭಾರತದ 50 ಪರ್ಸೆಂಟ್ ಜನರು, ಐದು ಲಕ್ಷ ಆರೋಗ್ಯ ಸೌಲಭ್ಯ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿನಿ ಯೋಜನೆ ಜಾರಿ ಮಾಡಲಾಗಿದೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಲ್ಲಿ 8 ಲಕ್ಷ ಜನರು ಎರಡು ಸಾವಿರ ಹಣ ಪಡೆಯುತ್ತಿದ್ದಾರೆ. ವಿಜಯಪುರದಲ್ಲಿ ಎರಡು ಲಕ್ಷ ರೈತರು ಕಿಸಾನ ಸಮ್ಮಾನ ಯೋಜನೆ ಲಾಭ ಪಡೆಯು ತ್ತಿದ್ದಾರೆ ಎಂದರು.
ಪ್ರಧಾನಮಂತ್ರಿ ಮೂರು ದಿನಗಳ ಹಿಂದೆ ಕರ್ನಾಟಕದಲ್ಲಿ ಆಗಮಿಸಿ ಹಲವಾರು ಯೋಜನೆಗಳನ್ನು ಕೊಡುಗೆ ನೀಡಿದ್ದಾರೆ. ಒಂದೇ ಭಾರತ್ ಯೋಜನೆ ಯಲ್ಲಿ ಭಾರತದಲ್ಲಿ 4೦೦ ರೈಲುಗಳು ಸಂಚರಿಸುತ್ತಿವೆ. ಬೆಂಗಳೂರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೆಂಪೇಗೌಡ ಅವರ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ.
ನಾನು ಬರುವಾಗ ನೋಡುತ್ತಿದ್ದೆ, ಪ್ರತಿ ರೋಡಗಳು ನಾಲ್ಕು ಲೇನ್ ಗಳಿಂದ ಕೂಡಿವೆ. ಇನ್ನೂ ಮುಂದೆ ಅವೆಲ್ಲ ಎಂಟು ಲೇನ್ ಗಳು ಆಗಲಿವೆ. ಮುಖ್ಯಮಂತ್ರಿ ವಿದ್ಯಾನಿಧಿಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸಲಾಗಿದೆ. ದಲಿತರಿಗೆ, ಆದಿವಾಸಿಗಳಿಗೆ ಮೀಸಲಾತಿ ಹೆಚ್ಚಿಸಿದ್ದು ಬಹಳ ದೊಡ್ಡ ಕಾರ್ಯ ಎಂದರು.
ಅಭಿವೃದ್ಧಿ ಎಂದರೆ ಬಿಜೆಪಿ, ಪಾರದರ್ಶಕತೆ ಎಂದರು. ನೋಡಿ ಈ ಬೆರಳಿನಲ್ಲಿ ಬಹಳ ಶಕ್ತಿ ಇದೆ. ಈ ಬೆರಳು ಸರಿಯಾದ ಜಾಗಕ್ಕೆ ಒತ್ತಿದ್ರೆ ಒಳಿತಾಗುತ್ತದೆ. ತಪ್ಪು ಜಾಗಕ್ಕೆ ಒತ್ತಿದ್ರೆ ಅನಾಹುತ ಆಗುತ್ತದೆ.
ಭಾರತದಲ್ಲಿ ವ್ಯಾಕ್ಷಿನೇಷನ್ ಮೂಲಕ ಮೋದಿ ಸುರಕ್ಷಾ ಚಕ್ರ ಕೊಟ್ಟಿದ್ದಾರೆ. ಹಾಗಾಗಿ ತಾವೆಲ್ಲರೂ ಮಾಸ್ಕ್ ಇಲ್ಲದೆ ಕೂತಿದಿರಿ ಭಾರತದಿಂದ 1೦೦ ದೇಶಗಳಿಗೆ ವ್ಯಾಕ್ಸಿನ್ ಕೊಡಲಾಗಿದೆ. ಅದರಲ್ಲಿ 50 ದೇಶಗಳಿಗೆ ಉಚಿತವಾಗಿ ಕೊಡಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ರು. ಯಾವ ದೇಶದ ಪ್ರಧಾನಿ ಆ ವಿದ್ಯಾರ್ಥಿಗಳನ್ನು ತರುವ ಪ್ರಯತ್ನ ಮಾಡಿದ್ರು.
ಆದ್ರೆ ಮೋದಿ ಪುತಿನ್ ಗೆ ಕರೆ ಮಾಡಿ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತರಲಾಯಿತು ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ, ವಿಜಯ ಸಂಕಲ್ಪ ಅಭಿಯಾನ ರಾಷ್ಟ್ರೀಯ ಅದ್ಯಕ್ಷರ ಮೂಲಕ ಆರಂಭ ಆಗಿರೋದು ನಮ್ಮ ಸೌಭಾಗ್ಯ, ಹಣಬಲ, ತೋಳಬಲದಿಂದ ಅಧಿಕಾರಕ್ಕೆ ಬರೋ ಕಾಲವಿಲ್ಲ, ಇದನ್ನು ಕಾಂಗ್ರೆಸ್ ನವರು ಮರೆಯಬೇಕು ಎಂದರು.
ಮೋದಿಜಿ ಅವರು ಜೆಪಿ ನಡ್ಡಾ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ನಾನೇ ಮುಂದಿನ ಮುಖ್ಯಮಂತ್ರಿ ಆಗ್ತೆನೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಮೋದಿ, ನಡ್ಡ, ಅಮೀತ್ ಶಾ ನೇತ್ರತ್ವದಲ್ಲಿ 140 ಕ್ಕೂ ಹೆಚ್ಚು ಸೀಟ್ ಗೆದ್ದು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ, ದೇಶದಲ್ಲಿ ಸದ್ಯ ಬಿಜೆಪಿ ಗಾಳಿ ಬೀಸ್ತಿದೆ ಎಂದರು.
ಜೆಪಿ ನಡ್ಡಾ ಅವರು ಇಂದು ಕರ್ನಾಟಕಕ್ಕೆ ಬಂದು ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರು ಮನೆಮನೆಗೆ ಹೋಗಿ ಬಿಜೆಪಿ ಸಾಧನೆಗಳು, ಕಾರ್ಯಗಳನ್ನು ತಿಳಿಪಡಿಸಬೇಕು. ಮಹಿಳಾ ಸಬಲೀಕರಣದ ಬಗ್ಗೆ ತಿಳಿ ಹೇಳಬೇಕಿದೆ ಎಂದರು.
ಯಂಕಾ, ನಾಣಿ, ಸೀಣಿ ಅಂತ ಅಲ್ಲೊಬ್ಬ ಇಲ್ಲೊಬ್ಬ ಬಿಟ್ಟರೆ ಮೋದಿಗೆ ಸಮನಾದ ನಾಯಕ ಕಾಂಗ್ರೆಸ್ ನಲ್ಲಿ ಯಾವ ನಾಯಕ ಇದ್ದಾರೆ ಹೇಳಿ ನೊಡೋಣ? ಎಂದರು. ವಿದೇಶಿಯವರು ಸಹ ಮೋದಿಯನ್ನು ಹೊಗಳುತ್ತಾರೆ, ಪಾಕಿಸ್ತಾನದ ಪ್ರಧಾನ ಮಂತ್ರಿಯೇ ಭಾರತವನ್ನು ಹೊಗಳುತ್ತಿದ್ದಾರೆ. ನೀವೇ ಯೋಚನೆ ಮಾಡಿ ಭಾರತ ಹೇಗೆ ಅಭಿವೃದ್ಧಿ ಆಗುತ್ತಿದೆ ಅಂತ.
ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೂ ಸಹ ಸಿಗಬೇಕಾದ ಸೌಲಭ್ಯ ಸಿಗಬೇಕು ಎಂದು ಪ್ರಧಾನಿ ಮೋದಿಜಿ ಅವರೇ ಕರೆ ಕೊಟ್ಟಿದ್ದಾರೆ ಎಂದರು. ಜಿಲ್ಲೆಯಲ್ಲಿ ಐದು ನದಿಗಳಿದ್ರೂ ಬರದ ನಾಡು ಎಂದು ಕರೆಸಿಕೊಳ್ತಿತ್ತು, ನಾನು ಸಿಎಂ ಆದ ಮೇಲೆ ಎಲ್ಲಾಕಡೆ ನೀರಾವರಿ ಮಾಡಿ, ನೀರಾವರಿಯ ಅನುಕೂಲ ಮಾಡಿದ್ದೇವೆ ಎಂದರು.
ಕರ್ನಾಟಕದಲ್ಲಿ ಬಿಜೆಪಿಗೆ ಬೆಂಬಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದರು.
ಕುತೂಹಲ ಕೆರಳಿಸಿದ ಯತ್ನಾಳ ಗೈರು
ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಮುರುಗೇಶ ನಿರಾಣಿ ಸೇರಿದಂತೆ ಹಲವಾರು ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗವಹಿಸಿದ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಳ್ಳಲಿಲ್ಲ.
ವಿಜಯಪುರ ನಗರದ ಜ್ಞಾನಯೋಗಾಶ್ರಮ ಹಾಗೂ ವಿವಿಧ ವಾರ್ಡ್ಗಳಿಗೆ ಮನೆ ಮನೆ ಭೇಟಿ ಕಾರ್ಯಕ್ರಮ ಹಾಗೂ ನಂತರ ಸಿಂದಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿಯೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಏತನ್ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್, ಬಿಜೆಪಿ ಅಶಿಸ್ತು ಸಹಿಸುವುದಿಲ್ಲ, ಈ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರಿಯ ಶಿಸ್ತು ಸಮಿತಿ ನೋಟಿಸ್ ನೀಡಿ ಸಮಿತಿಯ ಮುಂದೆ ಹಾಜರಾಗುವಂತೆ ತಿಳಿಸಿದೆ ಎಂದು ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.