ನಿಸ್ವಾರ್ಥ ಭಕ್ತಿಯ ಹೆಜ್ಜೆ

ವಿಜಯಪುರ: ಹಿರಿಯಜ್ಜಿಯನ್ನು ಹೆಗಲ ಮೇಲೆ ಹೊತ್ತುಕೊಂಡು ವ್ಯಕ್ತಿಯೋರ್ವ ದರ್ಶನಕ್ಕೆ ಆಗಮಿಸಿದ ಘಟನೆ ನಗರದ ಸೈನಿಕ ಶಾಲೆ ಆವರಣದಲ್ಲಿ ಜರುಗಿದೆ.


ನಾಗಠಾಣದಿಂದ ವೃದ್ದೆ ಮಹಿಳೆಯೊಬ್ಬಳು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಮಾಡಲು ಆಗಮಿಸಿದ್ದರು, ನಡೆಯಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದರು, ಬಬಲೇಶ್ವರ ಗ್ರಾಮದಿಂದ ಬಂದ ಬಸಪ್ಪ ಎಂಬುವವರು ಆ ಹಿರಿಯಜ್ಜಿಯನ್ನು ಹೆಗಲ ಮೇಲೆ ಕುಳ್ಳರಿಸಿಕೊಂಡು ಪ್ರವೇಶ ಧ್ವಾರದಿಂದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪವಿತ್ರ ಪಾರ್ಥೀವ ಶರೀರ ಇರಿಸಲಾಗಿದ್ದ ವೇದಿಕೆಯವರೆಗೂ ಕರೆ ತಂದು ನಿಸ್ವಾರ್ಥ ಭಕ್ತಿ ಪ್ರದರ್ಶಿಸಿದ.

Latest Indian news

Popular Stories