ವಿಜಯಪುರ: ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ಶ್ರೀಗಳ ಆಶಯದಂತೆ ಶಿಸ್ತು, ಸರಳವಾಗಿ, ಮನಸ್ಸು ಒಪ್ಪುವ ರೀತಿಯಲ್ಲಿ ನಡೆಯಿತು ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಬುಧವಾರ ಹೇಳಿದರು.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಮಾತನಾಡಿದ ಅವರು,
ಇದಕ್ಕೆ ಸರ್ಕಾರ, ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಸಹಕಾರ ನೀಡಿದ್ರು. ಶ್ರೀಗಳ ಆಶಯದಂತೆ ಗದ್ದುಗೆ, ಸ್ಮಾರಕ ಇಲ್ಲದೇ ಮುಂದುವರೆಯಬೇಕು ಎನ್ನುವುದಕ್ಕೆ ಎಲ್ಲರ ಸಹಕಾರ ಇದೆ. ಜ್ಞಾನಯೋಗಾಶ್ರಮದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಜೀವಂತವಾಗಿ ನಡೆಯಬೇಕು.
ಇದೊಂದು ಸಣ್ಣ ಪ್ರಸ್ತಾವನೆ ಇದೆ ಎಂದರು.
ಅಲ್ಲದೇ, ಗದ್ದುಗೆ, ಸ್ಮಾರಕ ಇಲ್ಲದೇ ಆಗಬೇಕು. ಮುಂದಿನ ಕಾರ್ಯಗಳು ಸುತ್ತೂರು, ಕನೇರಿ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ. ನಾವು ಭಕ್ತರಾಗಿ ಇರುತ್ತೇನೆ. ಇದಕ್ಕೆ ಸ್ವಾಮೀಜಿಗಳು, ನ್ಯಾಯಾಧೀಶರಾದ ಸೇರಿದಂತೆ ಎಲ್ಲರಿಗೂ ತಿಳಿಸಿದ್ದೇನೆ. ಇದಕ್ಕೆ ಎಲ್ಲರೂ ಒಪ್ಪಬೇಕು ಎಂದರು
ಪಠ್ಯಪುಸ್ತಕದಲ್ಲಿ ಸಿದ್ದೇಶ್ವರ ಸ್ವಾಮೀಜಿ ಜೀವನ ಚರಿತ್ರೆ ಅಳವಡಿಸುವುದನ್ನು ರಾಜಕೀಯವಾಗಿ ಹೇಳಲ್ಲ.
ಪಠ್ಯಪುಸ್ತಕದಲ್ಲಿ ಇರಬೇಕು ಅನ್ನೋದು ಎಲ್ಲರ ಆಶಯ ಆಗಿದೆ. ಕೃಷ್ಣಾ, ಕಾವೇರಿ, ಹಿಂದೂ ಮಹಾಸಾಗರ ಇನ್ನೂ ಕೆಲವು ಇವೆ. ಅದಕ್ಕಾಗಿ ಚಿತಾ ಭಸ್ಮದ ಬಗ್ಗೆ ಆಶ್ರಮದವರು ನಿರ್ಧಾರ ಮಾಡ್ತಾರೆ. ಇದು ಒಬ್ಬರು ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದರು.