ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ನಮ್ಮೆಲ್ಲರ ಹೊಣೆ: ಬಿರಾದಾರ

ವಿಜಯಪುರ : ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗು ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ ಕುರಿತು ಚಿಂತನ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಣಪತಿ ಸ್ಥಾಪನೆ ಮಣ್ಣಿನಿಂದ ತಯಾರಿಸಿ ಮಣ್ಣಿಗೆ ಹೊಗುವಂತಹ ಪರಿಸರ ಪ್ರೇಮ ಬೆಳೆಸಿಕೊಳ್ಳೋಣ. ಗಣಪತಿಯ ವಿಸರ್ಜನೆಯಿಂದ ಜಲಮಾಲಿನ್ಯ ವಾಗದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದರು.


ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ ಕುರಿತು ಉಪನ್ಯಾಸ ನೀಡಿದ ಡಾ.ಮಾಧವ ಗುಡಿ, ಪಿಒಪಿ ಬಳಕೆಯಂತಹ ರಸಾಯನಿಕ ಗಣಪತಿಗಳ ಬದಲಾಗಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಬೇಕು. ಜೊತೆಗೆ ಪ್ಲಾಸ್ಟಿಕ ಮುಕ್ತ ಗಣಪತಿ ಸಿದ್ದತೆ ಮಾಡಿಕೊಳ್ಳಬೇಕು. ಗಣಪತಿ ವಿಸರ್ಜನೆಯಿಂದ ನದಿಗಳಲ್ಲಿರುವ ಜಲಚರ ಪ್ರಾಣಿಗಳು ಜೀವಹಾನಿಯಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಯೊಬ್ಬರು ಸ್ಥಾಪಿಸಬೇಕು. ಪರಿಸರ ಸಂರಕ್ಷಣೆಯ ನಮ್ಮೆಲ್ಲರ ಜವಾಬ್ದಾರಿ ಎಂದರು.


ಮುಖ್ಯ ಅತಿಥಿಗಳಾದ ವಿಶ್ರಾಂತ ಪ್ರಾಚಾರ್ಯ ವಿಧ್ಯಾದರ ಸಾಲಿ ಮಾತನಾಡಿ, ನಾವು ವಾಸಿಸುತ್ತಿರುವ ಬಡಾವಣೆಯಲ್ಲಿ ಮರಗಳನ್ನು ಬೆಳೆಸುವ ಜೊತೆಗೆ ಅರ್ಥಪೂರ್ಣವಾದ ಗಣೇಶ ಉತ್ಸವ ಆಚರಿಸೋಣ ಎಂದರು.


ಸಿದ್ದೇಶ್ವರ ಕಲಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪೊನ್ನಪ್ಪ ಕಡೆಮನಿ ಮಾತನಾಡಿ, ಗಣಪತಿ ನಿರ್ಮಿಸುತ್ತಿರುವ ಕಲಾವಿದರು ಪರಿಸರ ಪ್ರೇಮಿ ಗಣಪತಿಗಳನ್ನು ಸಿದ್ದಪಡಿಸಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ನಗರ ಕಸಾಪ ಅಧ್ಯಕ್ಷೆ ಶ್ರೀದೇವಿ ಉತ್ಲಾಸರ ಮಾತನಾಡಿ, ಡಿಜೆ ಶಬ್ದ ಮಾಲಿನ್ಯ ಮಾಡದೆ ಗಣೇಶನ ಹಬ್ಬ ಪರಿಸರ ಸ್ನೇಹಿಯಾಗಿ ಸಂಸ್ಕೃತಿಯ ಪ್ರತೀಕವಾಗಲಿ. ಗಣಪತಿ ಸುಲಭವಾಗಿ ಕರಗಿ ಹೋಗುವಂತೆ ವಿಸರ್ಜನೆ ಮಾಡುವಂತಿರಬೇಕು ಎಂದರು.


ವಿಶ್ರಾಂತ ಸಿಪಿಐ ಸಿ.ಬಿ. ಬಾಗೇವಾಡಿ, ಬಸವರಾಜ ರೆಬಿನಾಳ, ಅಂಬಾದಾಸ ಜೋಶಿ, ಅಣ್ಣಾರಾಯಗೌಡ ಬಿರಾದಾರ ಮಾತನಾಡಿದರು. ಸರೋಜಿನಿ ಬಾಗೇವಾಡಿ, ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ, ವಿದ್ಯಾವತಿ ಅಂಕಲಗಿ, ಸತ್ಯಪ್ಪ ಹಡಪದ, ಕೆ.ಎಫ್. ಅಂಕಲಗಿ, ವಿಶ್ವನಾಥ ಕುಲಕರ್ಣಿ, ಪ್ರೊ.ಯು.ಎನ್. ಕುಂಟೋಜಿ, ವಿಜಯಲಕ್ಷ್ಮೀ ಹಳಕಟ್ಟಿ, ಆಶಾ ಬಿರಾದಾರ, ಅರ್ಜುನ ಶಿರೂರ, ಬಸನಗೌಡ ಬಿರಾದಾರ, ನಾಗರಾಜ ಹೊಸಳ್ಳಿ, ಎಂ.ಎ ಬಕ್ಷಿ, ಶೋಭಾ ಹರಿಜನ, ಎ.ಎಲ್. ಹಳ್ಳೂರ, ಮಹಾದೇವಿ ತೇಲಗಿ, ಡಿ.ಎಸ್. ಕೋನರಡ್ಡಿ, ಎ .ಎಚ್. ಕರಜಗಿ, ಸಿದ್ದಾಮಪ್ಪ ಜಂಗಮಶೆಟ್ಟಿ, ರವಿ ಕುಲಕರ್ಣಿ, ಚಂದ್ರು ಚೌಧರಿ, ಸಲೀಮ ವಾಲೀಕಾರ, ರಾಜು ಅಂಗಡಿ ಉಪಸ್ಥಿತರಿದ್ದರು.


ರವಿ ಕಿತ್ತೂರ ಮಹೆತಾಬ ಕಾಗವಾಡ ಶಾಂತಾ ವಿಭೂತಿ ಪರಿಸರ ಜಾಗೃತಿ ಗೀತೆ ಹಾಡಿ ಸಭೆಯ ಗಮನ ಸೆಳೆದರು ಸುರೇಶ ಜತ್ತಿ ನಿರೂಪಿಸಿದರು ಡಾ.ಆನಂದ ಕುಲಕರ್ಣಿ ವಂದಿಸಿದರು.

Latest Indian news

Popular Stories