ಬಬಲೇಶ್ವರ: ಕಾಂಗ್ರೆಸ್ ಸಾಧನೆ ತಿಳಿಸಲು ವಿಭಿನ್ನ ರೀತಿಯಲ್ಲಿ ಪ್ರಚಾರ

ವಿಜಯಪುರ : ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ ಸೇರಿದಂತೆ ವಿವಿಧ ರೀತಿಯ ಕಾರ್ಯಯೋಜನೆಗಳು ಅನುಷ್ಠಾನಗೊಂಡಿದ್ದು, ಈ ಸಾಧನೆಗಳನ್ನು ತಿಳಿಸಲು ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಬಿಎಲ್‌ಡಿಇ ಸಂಸ್ಥೆ ನಿರ್ದೇಶಕ ಬಸನಗೌಡ (ರಾಹುಲ್) ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂ.ಬಿ. ಪಾಟೀಲರ ಸಾರಥ್ಯದಲ್ಲಿ ಹಲವಾರು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ, ಕೆರೆ ತುಂಬುವ ಯೋಜನೆ, ಸುಸಜ್ಜಿತ ಸಮುದಾಯ ಭವನ ಸೇರಿದಂತೆ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ, ಈ ಅಭಿವೃದ್ಧಿ ಕಾರ್ಯದ ಒಂದು ದೃಶ್ಯಾವಳಿಗಳನ್ನು ಬೃಹತ್ ಪರೆದಯ ಮೇಲೆ ಪ್ರತಿ ತಾಲೂಕು, ಗ್ರಾಮ, ತಾಂಡಾಗಳಲ್ಲಿ ಪ್ರಸಾರ ಪಡಿಸಲಾಗುವುದು, ಇದಕ್ಕಾಗಿ ವಿಶೇಷ ೪ ಪ್ರಚಾರ ವಾಹನಗಳನ್ನು ಸಿದ್ಧಪಡಿಸಲಾಗಿದೆ, ಈ ವಾಹನ ಎಲ್ಲೆಡೆ ಸಂಚರಿಸಲಿದ್ದು, ಸರಿಸುಮಾರು ೩೦ ಕ್ಕೂ ಹೆಚ್ಚು ದಿನಗಳ ಕಾಲ ಈ ತೆರನಾದ ಅಭಿಯಾನ ನಡೆಯಲಿದೆ.

ಉದ್ಯೋಗ ಸೃಜನೆಗೆ ಆದ್ಯತೆ
ನೀರಾವರಿ ಯೋಜನೆಗಳ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬಬಲೇಶ್ವರ ಶಾಸಕರು ಬಬಲೇಶ್ವರದ ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಹೊಂದಿದ್ದು, ಉದ್ಯೋಗ ಸೃಜನೆಗೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ದೊಡ್ಡ ಕನಸು ಕಟ್ಟಿಕೊಂಡಿದ್ದಾರೆ ಎಂದರು.

ದೊಡ್ಡಮಟ್ಟದ ಆಟೋಮೊಬೈಲ್ ಮಾದರಿಯ ಅಲೈಡ್ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡುವ ಸಂಕಲ್ಪ ಮಾಡಿದ್ದು, ಕಾರ್ಖಾನೆಗಳು ಸ್ಥಾಪನೆಯಾದರೆ ಜಿಲ್ಲೆಯ ಚಿತ್ರಣವೇ ಬದಲಾಗುವ ಜೊತೆಗೆ ಉದ್ಯೋಗ ಸೃಜನೆಗೂ ದಾರಿಯಾಗುತ್ತದೆ, ಈ ನಿಟ್ಟಿನಲ್ಲಿ ಈ ವಿಶೇಷ ಪ್ರಯತ್ನ ಕೈಗೊಳ್ಳಲಾಗುವುದು ಎಂದರು.

ನೀರಾವರಿಯ ಜೊತೆಗೆ ಹೈನುಗಾರಿಕೆಗೂ ಪ್ರೋತ್ಸಾಹ ನೀಡಿ ಹಾಸನ ಮಾದರಿಯಲ್ಲಿ ವಿಮೂಲ್ ಬೆಳವಣಿಗೆಗೆ ಆದ್ಯತೆ ನೀಡಿ ಕ್ಷೀರಕ್ರಾಂತಿಯ ದೊಡ್ಡ ಮಟ್ಟದ ಆಶಯ ಹೊಂದಿದ್ದಾರೆ ಎಂದರು.

ಈಗಾಗಲೇ 200 ಶಾಲೆಗಳಲ್ಲಿ ಡಿಜಿಟಲ್ ಕ್ಲಾಸರೂಂ ಮಾಡಿದ್ದು, ಕ್ಷೇತ್ರದ ಪ್ರತಿ ಶಾಲೆಯೂ ಅಂತಾರಾಷ್ಟ್ರೀಯ ಮಟ್ಟದ ಶಾಲೆಯಾಗಿ ರೂಪುಗೊಳಿಸುವ ನಿಟ್ಟಿನಲ್ಲಿಯೂ ಎಂ.ಬಿ. ಪಾಟೀಲರು ದೊಡ್ಡ ಮಟ್ಟದ ಕಾರ್ಯಯೋಜನೆ ರೂಪಿಸಿದ್ದಾರೆ. ಈ ಎಲ್ಲ ದೃಷ್ಟಿಕೋನ, ಭವಿಷ್ಯದ ಮೆಟ್ಟಿಲು ಹಾಗೂ ಹಿಂದಿನ ಸಾಧನೆಯ ಫಥವನ್ನು ಈ ವಿಶೇಷ ಕರಪತ್ರಗಳ ಮೂಲಕ ತಿಳಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದು ಗೌಡನವರ, ಈರಗೊಂಡ ಬಿರಾದಾರ, ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯ ಅಜ ಯ ಪಾಟೀಲ ಗೂಗಿಹಾಳ ಉಪಸ್ಥಿತರಿದ್ದರು.

Latest Indian news

Popular Stories