ವಿಜಯಪುರ : ಮಣಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡುವ ಮೂಲಕ ಘೋರ ದೌರ್ಜನ್ಯ ನಡೆಸಿದ್ದಾರೆ, ಈ ಘಟನೆ ಮರೆಮಾಚಲು ಬಿಜೆಪಿ ಉಡುಪಿ ನರ್ಸಿಂಗ್ ಕಾಲೇಜ್ನಲ್ಲಿ ನಡೆಯದೇ ಇರುವ ಘಟನೆಯನ್ನು ನಡೆದಿದೆ ಎಂದು ಹೇಳಿ ಕೋಮು ದ್ವೇಷ, ಸುಳ್ಳು ಹರಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಹಿಂದ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಉಡುಪಿಯ ನರ್ಸಿಂಗ್ ಕಾಲೇಜ್ನಲ್ಲಿ ನಡೆದ ಘಟನೆಯ ಬಗ್ಗೆ ವಿನಾಕಾರಣ ಸುಳ್ಳು ಹರಡಿ, ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ಅಪಮಾನ ಮಾಡುತ್ತಿದ್ದಾರೆ, ಈಗಾಗಲೇ ಘಟನಾ ಸ್ಥಳಕ್ಕೆ ರಾಷ್ಟಿçÃಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸಹ ಭೇಟಿ ನೀಡಿ ಅಲ್ಲಿ ಯಾವುದೇ ರೀತಿ ಕ್ಯಾಮೆರಾ ಅಳವಡಿಸಲಾಗಿರಲಿಲ್ಲ ಎಂಬುದು ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂರ ವಿರೋಧ ಹಾಗೂ ಕಾಂಗ್ರೆಸ್ ಪ್ರಬಲ ವಿರೋಧಕ್ಕಾಗಿಯೇ ಸಂಘ ಪರಿವಾರ ಜನ್ಮ ತಾಳಿದೆ, ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ ಎಂಬ ಪಟ್ಟ ಕಟ್ಟುವಲ್ಲಿ ಆರ್ಎಸ್ಎಸ್ ವ್ಯವಸ್ಥಿತವಾಗಿ ತೊಡಗಿಸಿಕೊಂಡಿದೆ, ಅಭಿವೃದ್ಧಿಯ ಬಗ್ಗೆ ಸಂಘ ಪರಿವಾರ ಎಂದೂ ಧ್ವನಿ ಎತ್ತಿಲ್ಲ,
ಆದರೂ ಸಹ ಸಂಘಪರಿವಾರ ಹಾಗೂ ಬಿಜೆಪಿ ನಾಯಕರು ಹಾಗೂ ಸ್ಥಳೀಯ ಶಾಸಕ ಯಶಪಾಲ್ ಸುವರ್ಣ ವಿನಾಕಾರಣ ಈ ವಿಷಯವನ್ನು ಜೀವಂತವಿರಿಸುವ ಉಪದ್ರವ ಮಾಡುತ್ತಿದ್ದಾರೆ ಎಂದು ದೂರಿದರು. ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿದ್ದಾರೆ, ಎಫ್ಐಆರ್ ದಾಖಲಿಸಿದರೆ ಸಾಕೇ ಎಂದು ಪೊಲೀಸರ ಮೇಲೆ ಒತ್ತಡ ಹೇರುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರ ತನಿಖಾ ಸಂಸ್ಥೆಗಳೇ? ಇವರೇ ಆರೋಪಿಗಳು ಎಂದು ಘೋಷಿಸುವ ಇವರು ನ್ಯಾಯಾಧೀಶರೇ ಎಂದು ಪ್ರಶ್ನಿಸಿದರು.
ಫೇಕ್ ಪ್ಯಾಕ್ಟರಿ ಬಿಜೆಪಿ ನಾಯಕರ ಬಗ್ಗೆ ರಾಜ್ಯ ಸರ್ಕಾರ ಮೃದು ಧೋರಣೆ ತೋರಬಾರದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು, ತುಮಕೂರಿನ ಬಿಜೆಪಿ ಮಹಿಳೆ ಕಾರ್ಯಕರ್ತೆಯೊಬ್ಬರು ಮುಖ್ಯಮಂತ್ರಿಗಳ ಕುಟುಂಬದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದರು.
ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ನಾಗರಾಜ ಲಂಬು, ಕಾಂಗ್ರೆಸ್ ಯುವ ಮುಖಂಡ ಫಯಾಜ್ ಕಲಾದಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.