ಭೀಮಾತೀರದ ರಕ್ತಚರಿತ್ರೆಗೆ ಇತೀಶ್ರೀ!

ವಿಜಯಪುರ: ಭೀಮಾತೀರದ ಎರಡು ಕುಟುಂಬಗಳ ನಡುವಿನ ವೈಷಮ್ಯಕ್ಕೆ ಎಡಿಜಿಪಿ ಅಲೋಕಕುಮಾರ ಅಂತ್ಯ ಹಾಡಿದರು.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ವೇದಿಕೆ ಮೇಲೆಯೇ ಎರಡು ಗ್ಯಾಂಗ್‌ಗಳ ನಡುವೆ ಪೊಲೀಸರು ಅಪ್ಸತ್ ಮಾಡಿದರು. ಎಡಿಜಿಪಿ ಅಲೋಕ್‌ಕುಮಾರ್ ಎದುರು ಬೈರಗೊಂಡ ಹಾಗೂ ಚಡಚಣ ಕುಟುಂಬಸ್ಥರ ರಾಜಿ ಸಂಧಾನ ಯಶಸ್ವಿಗೊಳಿಸಿದರು.

ಆದ್ರೇ, ಮಹಾದೇವ ಸಾಹುಕಾರ್ ತನ್ನ ಮೂರು ಮಕ್ಕಳನ್ನು ಹೊಡೆಸಿದ್ದಾನೆ ಎಂದು ವಿಮಲಾಬಾಯಿ ಚಡಚಣ ಅಸಮಧಾನ ಹೊರಹಾಕಿದರು. ಚಡಚಣ ಗ್ಯಾಂಗಿನ ವಿಮಲಾಬಾಯಿ ಸಹೋದರ ಮಲ್ಲಿಕಾರ್ಜುನ ಪದಮಗೊಂಡನಿಂದಲು ಅಸಮಧಾನ ಹೊರಬಂದಿದೆ. ಇನ್ನೂ ಕೊನೆಗೆ ಎಡಿಜಿಪಿ ಸಾಹೇಬ್ರು ಹೇಳಿದಂತೆ ನಡೆದುಕೊಳ್ತೀವಿ ಎಂದು ಚಡಚಣ ಕುಟುಂಬಸ್ಥರು ಮಾತು ನೀಡಿದರು.

ಅಲ್ಲದೇ, ಮುಂದೆ ಎರಡು ಕುಟುಂಬಗಳು ದ್ವೇಷ ಸಾಧಿಸೋದಿಲ್ಲ. ಒಗ್ಗಟ್ಟಾಗಿ ಇರುತ್ತೇವೆ ಎಂದು ಎರಡು ಕುಟುಂಬ ಸದಸ್ಯರು ತದ್ದೇವಾಡಿ ಸ್ವಾಮೀಜಿ ಹಾಗೂ ಹತ್ತಳ್ಳಿ ಸ್ವಾಮೀಜಿ ಎದುರು ಹೇಳಿದರು. ಸದ್ಯಕ್ಕೆ ಎರಡು ಗ್ಯಾಂಗಿನ ನಡುವೆ ಶಾಂತಿ-ಸೌಹಾರ್ದತೆ ಮೂಡಿಸಿಲು ನಡೆಸಿದ ಪೊಲೀಸರ ಪ್ರಯತ್ನ ಯಶಸ್ವಿಯಾಗಿದೆ.

ಈ ವೇಳೆ ಉತ್ತರ ವಲಯ ಐಜಿಪಿ ಸತೀಷ ಕುಮಾರ್, ವಿಜಯಪುರ ಎಸ್‌ಪಿ ಎಚ್ ಡಿ ಆನಂದಕುಮಾರ, ಬಾಗಲಕೋಟೆ ಎಸ್‌ಪಿ, ಹಿರಿಯ-ಕಿರಿಯ ಪೊಲೀಸರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

Latest Indian news

Popular Stories