ಮಾಜಿ ಶಾಸಕ ಚರಂತಿಮಠರಿಂದ ಭೂ ಕಬಳಿಕೆ ; ತನಿಖೆಗೆ ಬದ್ನೂರ ಒತ್ತಾಯ

ಬಾಗಲಕೋಟೆ: ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಬಿಟಿಡಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾನೂನು ಬಾಹೀರವಾಗಿ ಹಂಚಿಕೆಯಾದ ನಿವೇಶನ ರದ್ದುಪಡಿಸಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ನ್ಯಾಯವಾದಿ ರಮೇಶ ಬದ್ನೂರ ಒತ್ತಾಯಿಸಿದ್ದಾರೆ.


ವೀರಣ್ಣ ಚರಂತಿಮಠ ರವರು ತಾವ ಬಿ.ಟಿ.ಡಿ.ಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಮ್ಮ ಜೋತೆ ವೈಯಕ್ತಿಕ ಬಾಂಧವ್ಯ ಹೊಂದಿದ ಹಾಗೂ ತಮ್ಮ ನೇತೃತ್ವದ ಸಂಘ ಸಂಸ್ಥೆಗಳಿಗೆ ನಿವೇಶನ ಮಾಡುವ ಸಂದರ್ಭದಲ್ಲಿ ನಿಯಮಾಳಿಗಳನ್ನು ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿ ಸರ್ಕಾರಕ್ಕೆ ನೂರಾರು ಕೋಟಿ ವಂಚಿಸಿದ್ದಾರೆ ಎಂದು ಅವರು ದೂರಿದರು.


ಬಿಟಿಡಿಎ 142 ನೇ ಬೋರ್ಡ್ ಸಭೆಯ ನಡಾವಳಿಯಲ್ಲಿ ವಿಷಯ ಸಂಖ್ಯೆ 10ರಲ್ಲಿ ಬಿವಿವಿ ಸಂಘದ ಶ್ರೀ ಮೋಟಗಿ, ಬಸವೇಶ್ವರ ದೇವಸ್ಥಾನ, ಶ್ರೀ ಮೋಟಗಿ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಹುಂಡೇಕಾರ ಮತ್ತು ಅಡವಿ ಸ್ವಾಮಿ ಶಾಸಕರಾದ ಶ್ರೀ ಮಠ, ಹೇಗೆ ಶಾಲೆ ಮುಳಗಡೆ ಜಾಗ ಬದಲಾಗಿ ನಿವೇಶನ ಹಂಚಿಕೆ ಮಾಡಲು ಯುವಿಟ್ ನಂ. 1ರಲ್ಲಿ ಖಾಲಿ ಇರುವ ಸೆಕ್ಟರ್ 59 ಪುರ್ತಿಯಾಗಿ ಹಂಚಿಕೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ ಎಂದರು.


ಸದರಿ ಸಂಸ್ಥೆಗೆ ಹಂಚಿಕೆ ಮಾಡಿಕೊಂಡಿರುವ ಸೆಕ್ಟರ್ ನಂ. 59 ಇದು ಮುಳಗಡೆ ಸಂತ್ರಸ್ತರಲ್ಲದೆ ಇದ್ದವರಿಗೆ ಬಾಗಲಕೋಟೆ ನಗರದಲ್ಲಿ ವಾಸಿಸುವ ನಿವೇಶನರಹಿತ ನಾಗರಿಕರಿಗೆ ಹರಾಜಿನ ಮೂಲಕ ನೀಡಲು ಮೀಸಲಿರುವ ಜಾಗ ಇದಾಗಿದೆ. ಇದಕ್ಕೆ ಹೊಂದಿಕೊಂಡೆ ಇರುವ ಸೆಕ್ಟರ್‌ನಲ್ಲಿ ಈಗಾಗಲೇ ಹರಾಜು ಪ್ರಕ್ರಿಯಲ್ಲಿ ಪ್ರತಿ ಸ್ಕ್ವೇರ್ ಫೀಟಿಗೆ 5000 ರೂಪಾಯಿಗೆ ಮಾರಾಟವಾಗಿರುವ ಉದಾಹಣೆ ಇದೆ. ಸದರಿ ಜಾಗ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಸ್ಕ್ವೇರ್ ಫೀಟ್ ವಿಸ್ತೀರ್ಣವಾಗಿದ್ದು, ಇದರ ಈಗಿನ ಮಾರಕಟ್ಟೆಯ ಮೌಲ್ಯ ಕನಿಷ್ಠ ರೂ. 400 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ, 6. ಯಾವುದೇ ಒಂದು ಸಂಸ್ಥೆಗೆ ಅಭಿವೃದ್ಧಿ ಹೊಂದದ ಭೂಮಿ ಹಂಚಿಕೆ ಮಾಡಬೇಕಾದ ನಿಯಮ ಇದೆ. ಆದರೆ ಇಲ್ಲಿ ನಿಯಮ ಬಾಹಿರವಾಗಿ ಅಭಿವೃದ್ಧಿ ಹೊಂದಿದ 201 ಎಕರೆಗೂ ಹೆಚ್ಚು ಭೂಮಿಯನ್ನು ತಮ್ಮ ಪ್ರಭಾವ ಭೀರಿ ಹಂಚಿಕೆ ಮಾಡಿಕೊಂಡಿರುತ್ತಾರೆ ಎಂದು ಅವರು ಆಪಾದಿಸಿದ್ದಾರೆ.
ಪ್ರಾಧಿಕಾರದ ನಿಯಮದ ಪ್ರಕಾರ ಭೂಮಿ ಕಳೆದುಕೊಂಡ ಸಂತ್ರಸ್ತ ಅಥವಾ ಸಂಸ್ಥೆಯ ಹೆಸರಿಗೆ ಮಾತ್ರ ಭೂಮಿ ಹಂಚಿಕೆ ಮಾಡುವ ನಿಯಮ ಇದೆ. ಆದರೆ ಇಲ್ಲಿ ಶ್ರೀ ಮೋಟಗಿ ಬಸವೇಶ್ವರ ದೇವಸ್ಥಾನ, ಶ್ರೀ ಮೋಟಗಿ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಹುಂಡೇಕಾರ ಮತ್ತು ಅಡವಿ ಸ್ವಾಮೀ ಮಠ, ನೇಗೆ ಶಾಲೆ ಇವು ಸ್ವತಂತ್ರವಾಗಿ ಭೂವಿ ಕಳೆದುಕೊಂಡಿದ್ದು, ನಿಯಮ ಉಲ್ಲಂಘಿಸಿ ಎಲ್ಲ ಒಟ್ಟುಗೂಡಿಸಿ, ಬಿ.ವಿ.ವಿ ಸಂಸ್ಥೆ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಬಸವೇಶ್ವರ ದೇವಸ್ಥಾನದ ಮಾಲಿಕತ್ವದ ವಿವಾದವು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಇದೆ. ಆದಾಗ್ಯೂ ಚರಂತಿಮಠ ಅವರು ತಮ್ಮ ಪ್ರಭಾವ ಬೀರಿ ಭೂಮಿ ಹಂಚಿಕೆ ಮಾಡಿಕೊಂಡಿದ್ದಾರೆ. ಮಾಜಿ ಶಾಸಕರ ಈ ಅಕ್ರಮ ನೂರಾರು ಕೋಟಿ ಮೌಲ್ಯದ ಭೂಕಬಳಿಕೆಯನ್ನು ರದ್ದುಪಡಿಸಿ, 2008 ರಿಂದ 2023 ವರಗೆ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶಗಳನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Latest Indian news

Popular Stories