ವಿಜಯಪುರ : 21 ವರ್ಷದ ಯುವಕನಿಗೆ ಯಶಸ್ವಿ ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಲೈವ್ ಕಿಡ್ನಿ ಕಸಿ ಮೂಲಕ ಇದೆ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ಮಾಡಲಾಗಿದೆ ಎಂದು ಯಶೋಧಾ ಆಸ್ಪತ್ರೆಯ ಮುಖ್ಯಸ್ಥರು ಡಾ. ರವೀಂದ್ರ ಮದ್ದರಕಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಿಡ್ನಿ ಸಮಸ್ಯೆ ಬಳಲುತ್ತಿದ ಬಹಳಷ್ಟು ಜನರಿಗೆ ಚಿಕಿತ್ಸೆಗಾಗಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ದೂರದ ಊರಿಗೆ ಹೋಗಬೇಕಾಗಿತ್ತು. ಅಲ್ಲದೇ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತಿತ್ತು. ಆದರೆ ಅತೀ ಕಡಿಮೆ ಖರ್ಚಿನಲ್ಲಿ ವಿಜಯಪುರದಲ್ಲೇ ಚಿಕಿತ್ಸೆ ದೊರೆಯುವಂತೆ ಮಾಡಿದ್ದು ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
21 ವರ್ಷದ ಯುವಕ ಕಳೆದ 18 ವರ್ಷಗಳಿಂದ ಡಯಾಲೀಸಸ್ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ನಮ್ಮ ಆಸ್ಪತ್ರೆ ಕಿಡ್ನಿ ಟ್ರಾನ್ಸ್ಫರಂಟ್ ಮಾಡಲು ಅನುಮತಿ ದೊರೆತಿದೆ. ಆ ಹಿನ್ನೆಲೆಯಲ್ಲಿ ಫೇಬ್ರವರಿಯಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿ ಲೈವ್ ಕಿಡ್ನಿ ಟ್ರಾನ್ಸ್ಫರ್ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಯುವಕನಿಗೆ 70 ವರ್ಷದ ಅಜ್ಜಿಯಿಂದ ಕಿಡ್ನಿ ತೆಗೆದು ಯುವಕನಿಗೆ ಜೋಡಿಸಲಾಗಿದೆ. ಯುವಕ ಹಾಗೂ ಅಜ್ಜಿ ಇಬ್ಬರೂ ಅರೋಗ್ಯವಾಗಿದ್ದಾರೆ. ನಮ್ಮ ಆಸ್ಪತ್ರೆಗೆ ಇದೊಂದು ಐತಿಹಾಸಿಕ ಕ್ಷಣ ಎಂದು ಸಂತಸ ಹಂಚಿಕೊಂಡರು.
ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗಾಗಿ ನಾನೇ ಸುಮಾರು 278 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದ್ದೆ. ಆದರೆ ನಮಗೆ ಅನುಮತಿ ದೊರೆತ ನಂತರ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಬಡವರಿಗೆ ಉಚಿತವಾಗಿ ಹಾಗೂ ಸರ್ಕಾರಿ ಯೋಜನೆಗಳ ಭಾಗವಾಗಿ ಚಿಕಿತ್ಸೆ ನೀಡುವ ಮೂಲಕ ಈ ಭಾಗದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸಾ ತಂಡದಲ್ಲಿದ್ದ,ಡಾ. ಭುವನೇಶ ಆರಾಧ್ಯ, ಡಾ. ಅವಿನಾಶ್ ಓದುಗೌಡರ, ಡಾ. ಸುನಿಲಕುಮಾರ ಸಜ್ಜನ, ಡಾ. ಶ್ರೀನಾಥ ಪಾಟೀಲ, ಡಾ. ಮಹೇಶ ಬಾಗಲಕೋಟಕರ್ ಅಲ್ಲದೇ ಈ ಶಸ್ತ್ರ ಚಿಕಿತ್ಸೆಗೆ ಮಾರ್ಗದರ್ಶನ ಮಾಡಿದ ಡಾ. ಮಂಜುನಾಥ ದೋಶೆಟ್ಟಿ ಹಾಗೂ ಡಾ. ಸಂತೋಷ ಕಾಮಶೇಟ್ಟಿ, ಹಾಗೂ ಯಶೋಧಾ ಟ್ರಸ್ಟ್ ನ ಕಾರ್ಯದರ್ಶಿ ಡಾ ಕಮಲಾ ಮದ್ದ ಮದ್ದರಕಿ ಉಪಸ್ಥಿತರಿದ್ದರು.