ವಿಜಯಪುರ: ಅಕ್ರಮವಾಗಿ ವನ್ಯಜೀವಿ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮಗಳು ಹಾಗೂ ವಿವಿಧ ಜಾತಿಯ ವನ್ಯಜೀವಿಗಳ ಅಂಗಾಂಗಗಳ ಸಾಗಾಟ ವೇಳೆ ಪೊಲೀಸರು ದಾಳಿಗೈದು ಒರ್ವನನ್ನು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಾಗಲೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬುಧವಾರ ನಡೆದಿದೆ.
ಮಹಾರಾಷ್ಟ್ರದ ಅಸವಲದಾರಾ ಗ್ರಾಮದ ಪವನ್ ಭೋಸಲೆ ಬಂಧಿತ ಆರೋಪಿ. ಅಕ್ರಮವಾಗಿ ಜೀವಿ ಕೃಷ್ಣಮೃಗದ ಕೊಂಬು, ತಲೆಬುರುಡೆ, ಚರ್ಮ ಹಾಗೂ ವಿವಿಧ ಜಾತಿಯ ವನ್ಯಜೀವಿ ಪ್ರಾಣಿಗಳ ಅಂಗಾಂಗಳನ್ನು ಸಾಗಾಟ ಮಾಡುತ್ತಿದ್ದವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 807-ಉಡದ ಶಿಶ್ನಗಳು, 116-ಇಂದ್ರಜಾಲಗಳು, 02- ಕಾಡ ಬೆಕ್ಕಿನ ಪಾದಗಳು, 02-ಕಾಡ ಬೆಕ್ಕು ಉಗುರುಗಳು, 03-ಕರಡಿಯ ಉಗುರುಗಳು, 28-ನೀರು ಪಕ್ಷಿಗಳ ಕಾಲುಗಳು, 02-ಉಡದ ಕಾಲುಗಳು, 73-ಗೂಬೆಯ ಪುಕ್ಕಗಳು, 04-ಕರಡಿಯ ಹಲ್ಲುಗಳು, 32-ಮುಂಗಸಿಯ ಕಾಲುಗಳು, 07-ಮುಂಗುಸಿಯ ದವಡೆಗಳು, 16-ಮುಂಗುಸಿಯ ಚರ್ಮದಿಂದ ಮಾಡಿದ ಉಂಡೆಗಳು, 26- ಕಾಡು ಹಂದಿಯ ಹಲ್ಲುಗಳು, 03-ಅಪರಿಚಿತ ಕಾಡು ಪ್ರಾಣಿಯ ಉಗುರುಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಅರಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.