ವಿಜಯಪುರ: ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಸದಸ್ಯರ ಕಿಡ್ನಾಪ್, ಹಲ್ಲೆ

ವಿಜಯಪುರ: ಗ್ರಾಮ ಪಂಚಾಯತ ಅಧ್ಯಕ್ಷ ಚುನಾವಣೆ ಕಾವು ವಿವಿಧ ಗ್ರಾಮ ಪಂಚಾಯತಗಳಲ್ಲಿ ಜೋರಾಗಿ ನಡೆಯುತ್ತಿವೆ, ಏತನ್ಮಧ್ಯೆ ಗ್ರಾಮ ಪಂಚಾಯತ ಸದಸ್ಯರ ಕಿಡ್ನಾಪ್, ಹಲ್ಲೆ ಮೊದಲಾದ ಬೆಳವಣಿಗೆ ನಡೆಯುತ್ತಿರುವುದು ಆತಂಕ ಸೃಷ್ಟಿಸಿದೆ.


ಜಂಬಗಿ ಗ್ರಾಮ ಪಂಚಾಯತ ಸಹ ಈ ರೀತಿಯ ಘಟನೆ ನಡೆದಿದ್ದು, ಗ್ರಾಮ ಪಂಚಾಯತ ಸದಸ್ಯರ ಅಪರಹಣ, ಕೆಲವು ಸದಸ್ಯರ ಮೇಲೆ ಹಲ್ಲೆ ಮೊದಲಾದ ಘಟನೆಗಳು ನಡೆದಿವೆ.


ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆ ಹಿನ್ನೆಲೆ ಎಂಟು ಗ್ರಾಮ ಪಂಚಾಯತಿ ಸದಸ್ಯರನ್ನು ಅಪಹರಣ ಮಾಡಲಾಗಿದೆ ಎಂಬ ದೂರು ಕೇಳಿಬಂದಿದೆ, 18 ಸದಸ್ಯ ಬಲ ಇರುವ ಜಂಬಗಿ ಗ್ರಾಮ ಪಂಚಾಯತನಲ್ಲಿ ಎಂಟು ಸದಸ್ಯರನ್ನು ಅಪಹರಣ ಮಾಡಿರುವ ದೂರು ಕೇಳಿ ಬಂದಿದೆ. ಇನ್ನೂ ಕೆಲವು ಗ್ರಾಮ ಪಂಚಾಯತ ಸದಸ್ಯರ ಮೇಲೆ ಹಲ್ಲೆ ನಡೆದಿದೆ.


ತಲೆ ಮೊದಲಾದ ಭಾಗಗಳಲ್ಲಿ ಹಲ್ಲೆಗೀಡಾಗಿರುವ ಗ್ರಾಮ ಪಂಚಾಯತ ಸದಸ್ಯರು ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಚಿಕಿತ್ಸೆ ಪಡೆಯುತ್ತಲೇ ಹೇಳಿಕೆ ನೀಡಿರುವ ಹಲ್ಲೆಗೊಳಗಾದ ಸದಸ್ಯ, ಬೇರೆ ಕೋಮಿಗೆ ಸೇರಿದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡುತ್ತೀಯಾ ಎಂದು ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಹಲ್ಲೆ ನಡೆಸಿದರೆ ಹೇಗೆ? ಪಾರದರ್ಶಕವಾಗಿ ಚುನಾವಣೆ ಎದುರಿಸಲು ಸಾಧ್ಯವಿಲ್ಲದೇ ಈ ರೀತಿಯ ಕೃತ್ಯ ನಡೆಸಿದ್ದಾರೆ ಎಂದು ಅಳಲು ತೋಡಿಕೊಂಡರು.


ಈ ಘಟನೆಯನ್ನು ಖಂಡಿಸಿ ಜಂಬಗಿ ಗ್ರಾಮಸ್ಥರು ಸಹ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಗೆ ಅಣಿಯಾಗಿದ್ದಾರೆ, ಚುನಾವಣೆಯನ್ನು ನ್ಯಾಯಯುತವಾಗಿ ಹಾಗೂ ಪ್ರಜಾಪ್ರಭುತ್ವ ಮಾರ್ಗವಾಗಿ ಎದುರಿಸಬೇಕು, ಅದನ್ನು ಬಿಟ್ಟು ಅಪಹರಣ, ಹಲ್ಲೆಯಂತಹ ಕೃತ್ಯಗಳು ನಡೆಯುತ್ತಿರುವುದು ಗ್ರಾಮಕ್ಕೂ ಸಹ ಶೋಭೆ ತರುತ್ತಿಲ್ಲ, ಹೀಗಾಗಿ ಜಿಲ್ಲಾಡಳಿತ ಕೂಡಲೇ ಅಪಹರಣಕ್ಕೊಳಗಾದ ಸದಸ್ಯರ ರಕ್ಷಣೇಗೆ ಧಾವಿಸಬೇಕು, ಅವರನ್ನು ಕೂಡಲೇ ಕರೆ ತರಬೇಕು, ಅಪಹರಣ ಹಾಗೂ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Latest Indian news

Popular Stories